ಕಳತ್ತೂರು ಚರ್ಚ್‌ನ ಧರ್ಮಗುರು ಫಾ.ಲಾರೆನ್ಸ್ ಡಿಸೋಜ ನಿಧನ
ಶಿರ್ವ : ಶಿರ್ವ ಸಮೀಪದ ಕಳತ್ತೂರು ಇಗರ್ಜಿಯ ಪ್ರಧಾನ ಧರ್ಮಗುರು ರೆ.ಫಾ.ಲಾರೆನ್ಸ್ ಬಿ.ಡಿಸೋಜ(71) ಮೇ 17ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೂಲತಃ ಪಲಿಮಾರು ಸಮೀಪದ ಬಳ್ಕುಂಜೆ ದಿ.ಬೆಳ್ಚೋರ್ ಡಿಸೋಜ ಹಾಗೂ ಜೋಸ್ಪಿನ್ ದಂಪತಿ ಪುತ್ರ. 1977ರಲ್ಲಿ ಗುರುದೀಕ್ಷೆ ಪಡೆದ ಇವರು, ಸಹಾಯಕ ಧರ್ಮಗುರುಗಳಾಗಿ ಉದ್ಯಾವರ, ಮೌಂಟ್ ರೋಸರಿ ಕಲ್ಯಾಣ ಪುರ, ನಂತರ ಪ್ರಧಾನ ಧರ್ಮಗುರುಗಳಾಗಿ ಇಂದಬೆಟ್ಟು, ತಾಕೋಡೆ, ಬೆಳ್ತಂಗಡಿ, ಮುದರಂಗಡಿ, ಬೆಳ್ಮಣ್‌ನಲ್ಲಿ ಸೇವೆ ಸಲ್ಲಿಸಿ, 2019ರಿಂದ ಪ್ರಸ್ತುತ ಕಳತ್ತೂರು ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇವರ ಅಂತಿಮ ಪ್ರಾರ್ಥನಾ ವಿಧಿಗಳು ಮೇ 19ರಂದು ಅಪರಾಹ್ನ ಗಂಟೆ ೩.೦೦ಕ್ಕೆ ಕಳತ್ತೂರು ಚರ್ಚ್‌ನಲ್ಲಿ ಜರುಗಲಿದೆ ಎಂದು ಉಡುಪಿ ಕೆಥೋಲಿಕ್ ಧರ್ಮ ಪಾ್ಂರತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story