ಭೋವಿ ಅಭಿವೃದ್ಧಿ ನಿಗಮ ಎಂಡಿ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಮೇ 19: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರಿಗೆ ಸಂಬಂಧಿಸಿದ ಐದು ವಿವಿಧ ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದೆ.
ಭೋವಿ ನಿಗಮದ ಹಣ ದುರ್ಬಳಕೆ ಹಾಗೂ ಅಸಮತೋಲಿತ ಆಸ್ತಿ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಎಸಿಬಿ ತಂಡಗಳು ಗುರುವಾರ ಬೆಂಗಳೂರಿನ ವಿಜಯನಗರದ ಎಂ.ಸಿ ಲೇಔಟ್ನ ನಾಗರಾಜಪ್ಪರ ವಾಸದ ಮನೆ, ಸಹೋದರನ ಮನೆ, ಮಾಗಡಿ ರಸ್ತೆಯಲ್ಲಿರುವ ನಾಗರಾಜಪ್ಪ ಪರಿಚಿತರ ಅಪಾಟ್ಮೆರ್ಂಟ್, ಹೊಸಕೋಟೆ ತಾಲೂಕಿನ ಬೆನ್ನಿಗಾನಹಳ್ಳಿಯಲ್ಲಿರುವ ವಾಸದ ಮನೆ, ಚೆನ್ನಪಟ್ಟಣ ತಾಲೂಕಿನ ಹಾರೋಕೊಪ್ಪದಲ್ಲಿರುವ ನಾಗರಾಜಪ್ಪರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕಾರ್ಯ ಮುಂದುವರಿಸಿವೆ.
Next Story