varthabharthi


ರಾಷ್ಟ್ರೀಯ

ಅಸ್ಸಾಂ: ಪ್ರವಾಹ ರಕ್ಷಣಾ ಕಾರ್ಯಕರ್ತರ ಬೆನ್ನಿನ ಮೇಲೆ ಬಿಜೆಪಿ ನಾಯಕನ ಸವಾರಿಗೆ ವ್ಯಾಪಕ ಆಕ್ರೋಶ

ವಾರ್ತಾ ಭಾರತಿ : 19 May, 2022

Photo: Twitter

ಅಸ್ಸಾಂ: ಪ್ರವಾಹ ಪೀಡಿತ ಪ್ರದೇಶದ ಪರಿಶೀಲನೆಗೆ ಹೊರಟ ಬಿಜೆಪಿ ಶಾಸಕರು ಪ್ರವಾಹ ರಕ್ಷಣಾ ಕಾರ್ಯಕರ್ತರ ಬೆನ್ನಿನ ಮೇಲೆ ಸವಾರಿ ಮಾಡಿರುವ ಘಟನೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ರಾಜ್ಯದಲ್ಲಿ ಈ ಘಟನೆ ನಡೆದಿದೆ. 

ಶಾಸಕನನ್ನು ಸಿಬು ಮಿಸ್ರಾ ಎಂದು ಗುರುತಿಸಲಾಗಿದ್ದು, ಇವರು ಲುಂದಿಂಗ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. 

ಅಸ್ಸಾಮ್‌ ರಾಜ್ಯದ 27 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, 6.6 ಲಕ್ಷಕ್ಕೂ ಅಧಿಕ ಮಂದಿ ಪ್ರವಾಹ ಸಂತ್ರಸ್ತರಾಗಿದ್ದಾರೆ. ಈ ನಡುವೆ, ಪರಿಶೀಲನೆಗೆಂದು ಬಂದ ಶಾಸಕ ರಕ್ಷಣಾ ತಂಡದ ಸಿಬ್ಬಂದಿಯೋರ್ವರ ಬೆನ್ನೇರಿ ದೋಣಿಗೆ ಹೋಗಿರುವುದು ಕಂಡು ಬಂದಿದೆ, ಅಲ್ಲಿ ಕೇವಲ ಮೊಣಕಾಲು ಮುಳುಗುವಷ್ಟೇ ನೀರಿದ್ದರೂ, ರಕ್ಷಣಾ ಸಿಬ್ಬಂದಿಯಲ್ಲಿ ತನ್ನನ್ನು ಹೊರಿಸಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ʼಸಂವೇದನಾರಹಿತ ಶಾಸಕʼ ಎಂದು ಹಲವರು ಟೀಕಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)