ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಮತ್ತೊಂದು ಆಡಿಯೊ ವೈರಲ್
ಅನಂತರಾಜು
ಬೆಂಗಳೂರು, ಮೇ 19: ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಮತ್ತೊಬ್ಬ ಮಹಿಳೆಯೊಂದಿಗೆ ಅನಂತರಾಜು ಪತ್ನಿ ನಡೆಸಿರುವ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನಂತರಾಜು ಸಾಯುವ 20 ದಿನಗಳ ಮೊದಲೇ ಅವರ ಪತ್ನಿ ಸುಮಾ ಸಾವಿನ ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಕಳೆದ ಆರು ವರ್ಷಗಳಿಂದ ಅನಂತರಾಜು ಮತ್ತು ರೇಖಾ ಸಂಬಂಧ ಇರಿಸಿಕೊಂಡಿದ್ದರು. ತನ್ನ ಗಂಡ ಪರಸ್ತ್ರೀ ಸಂಬಂಧ ಬೆಳೆಸಿರುವುದು ತಿಳಿದು ಸುಮಾ ಕೆಂಡಾಮಂಡಲವಾಗಿದ್ದರು. ಇದೇ ಸಿಟ್ಟಿನಲ್ಲಿ ರೇಖಾಗೆ ಕರೆ ಮಾಡಿ, ಅನಂತರಾಜು ಕೊಲೆಯಾಗುತ್ತಾನೆ ನೋಡು ಎಂದು ಸುಮಾ ಬೆದರಿಕೆ ಹಾಕಿದ್ದರು.
ಅನಂತರಾಜು ಸಾಯುವ 20 ದಿನಗಳ ಮೊದಲು ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೊ 6 ನಿಮಿಷ 49 ಸೆಕೆಂಡ್ ಇದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರೇಖಾ ಬಂಧನ: ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಆರೋಪ ಕೇಳಿ ಬಂದಿರುವ ರೇಖಾ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಮೃತ ಅನಂತರಾಜು ಪತ್ನಿ ಸುಮಾ ನೀಡಿದ್ದ ದೂರು ಆಧರಿಸಿ ರೇಖಾ, ವಿನೋದ್, ಸ್ಪಂದನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.