varthabharthi


ರಾಷ್ಟ್ರೀಯ

ಪಾಂಗಾಂಗ್ ಲೇಕ್ ಎರಡನೇ ಸೇತುವೆ; ಭಾರತ ಹೇಳುವುದೇನು ?

ವಾರ್ತಾ ಭಾರತಿ : 20 May, 2022

ಹೊಸದಿಲ್ಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಪಾಂಗಾಂಗ್ ತ್ಸೊ ಸರೋವರದಲ್ಲಿ ಚೀನಾ ಎರಡನೇ ಸೇತುವೆ ನಿರ್ಮಾಣ ಮಾಡುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಪರಿಸ್ಥಿತಿಯ ಮೇಲೆ ಭಾರತ ನಿಗಾ ಇಟ್ಟಿದೆ" ಎಂದು ಹೇಳಿದೆ.

ಪಾಂಗಾಂಗ್ ತ್ಸೋ ಸರೋವರದ ಚೀನಾ ಬದಿಯಿಂದ ಎರಡನೇ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಉಭಯ ದೇಶಗಳ ನಡುವಿನ ಮಾತುಕತೆ ಪರಿಣಾಮಕಾರಿಯಾಗಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, "ಸೇತುವೆ ನಿರ್ಮಾಣ ಮತ್ತು ಉಭಯ ದೇಶಗಳ ನಡುವಿನ ಮಾತುಕತೆ ಭಿನ್ನ ವಿಚಾರಗಳು. ಅವುಗಳನ್ನು ಭಿನ್ನ ಮಟ್ಟದಲ್ಲಿ ನಿಭಾಯಿಸಲಾಗುವುದು" ಎಂದು ಹೇಳಿದರು.

"ಮಾತುಕತೆ ವಿಚಾರ ಮತ್ತು ಸೇತುವೆ ವಿಚಾರ ಎರಡೂ ಪರಿಗಣನೆಯಲ್ಲಿದೆ. ಮಾತುಕತೆ ಬಗ್ಗೆ ಹೇಳುವುದಾದರೆ, ನಮ್ಮ ನಿಲುವು ಸ್ಪಷ್ಟವಾಗಿದ್ದು, ರಾಜತಾಂತ್ರಿಕ ಹಾಗೂ ಮಿಲಿಟರಿ ಹೀಗೆ ಹಲವು ಸುತ್ತಿನ ಮಾತುಕತೆ ವೇಳೆ ಪದೇ ಪದೇ ಅದನ್ನು ಚೀನಾಗೆ ಮನವರಿಕೆ ಮಾಡುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.

"ಎರಡನೇ ಸೇತುವೆ ನಿರ್ಮಿಸುತ್ತಿರುವ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಈ ಪರಿಸ್ಥಿತಿಯ ಮೇಲೆ ನಾವು ನಿಗಾ ಇರಿಸಿದ್ದೇವೆ. ಅತಿಕ್ರಮಣ ನಡೆದಿದೆ ಎಂಬ ಭಾವನೆ ನಮ್ಮಲ್ಲಿ ಸದಾ ಇದೆ.. ಚೀನಾ ಜತೆಗೆ ಮಾತುಕತೆ ನಡೆಯುತ್ತಿದೆ" ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)