varthabharthi


ಉಡುಪಿ

ಎಸೆಸೆಲ್ಸಿ ಟಾಪರ್ ಪುನೀತ್ ನಾಯ್ಕ್‌ಗೆ ಎಸ್‌ಐಓ ಸನ್ಮಾನ

ವಾರ್ತಾ ಭಾರತಿ : 20 May, 2022

ಉಡುಪಿ : ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದ ಮಲ್ಪೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪುನೀತ್ ನಾಯ್ಕ್‌ರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಮಲ್ಪೆಘಟಕದ ವತಿಯಿಂದ ಇಂದು ಸನ್ಮಾನಿಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುನೀತ್ ನಾಯ್ಕ್, ನಿರಂತರ ಪರಿಶ್ರಮ ಶ್ರದ್ಧೆ ಆಸಕ್ತಿ ಮತ್ತು ಅಧ್ಯಯನದಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು. ಮಲ್ಪೆ ಬಂದರಿನಲ್ಲಿ ಕೆಲಸದ ಜೊತೆ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿ ಅಂಕ ಪಡೆದ ಪುನೀತ್ ರವರ ಈ ಸಾಧನೆ ಇತರೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತದೆ ಎಂದು ಎಸ್‌ಐಓ ಮಲ್ಪೆಘಟಕದ ಅಧ್ಯಕ್ಷ ಶೇಖ್ ಅಯಾನ್ ತಿಳಿಸಿದರು.

ಈ ಸಂದರ್ಭದಲ್ಲಿ ಎಸ್‌ಐಓ ಮಲ್ಪೆ ಘಟಕದ ಕಾರ್ಯದರ್ಶಿಗಳಾದ ನೌಫಲ್ ಅಹಮದ್, ನೌಮನ್, ಕಾರ್ಯಕರ್ತರಾದ ಅಜ್ಮಲ್ ಮತ್ತು ಸಫಾನ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)