varthabharthi


ನಿಧನ

ಯೂನುಸ್ ಖಾನ್

ವಾರ್ತಾ ಭಾರತಿ : 21 May, 2022

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಉದ್ಯಮಿ, ಕಾಂಗ್ರೆಸ್ ಮುಖಂಡ, ಯೂನುಸ್ ಖಾನ್ (75) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಕಳೆದ ಸುಮಾರು 20 ವರ್ಷಗಳಿಂದ ನಗರದ ದರ್ಬೆಯಲ್ಲಿ ಅಟೋ ಲಿಂಕ್ಸ್ ನಡೆಸುತ್ತಿದ್ದ ಯೂನುಸ್ ಖಾನ್ ಅವರು ಉತ್ತಮ ಹಾಡುಗಾರರಾಗಿದ್ದರು. ಪುತ್ತೂರಿನ ದರ್ಬೆ ಮಹಮ್ಮದೀಯ ಜುಮಾ ಮಸೀದಿ ಆಡಳಿತ ಸಮಿತಿಯ ಮಾಜಿ ಸದಸ್ಯರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)