varthabharthi


ಕರ್ನಾಟಕ

ವರ್ಲ್ಡ್ ಸ್ಕೂಲ್ ಗೇಮ್ಸ್ : ಕೊಡಗಿನ ಉನ್ನತಿಗೆ ಕಂಚು

ವಾರ್ತಾ ಭಾರತಿ : 21 May, 2022

ಉನ್ನತಿ

ಮಡಿಕೇರಿ : ಫ್ರಾನ್ಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕೂಲ್ ಗೇ‌ಮ್ಸ್ ನಲ್ಲಿ‌ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರು ಭಾರತಕ್ಕೆ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.

ಫ್ರಾನ್ಸ್ ನಲ್ಲಿ ನಡೆದ ವರ್ಲ್ಡ್ ಸ್ಕೂಲ್ ಗೇಮ್ಸ್ ನ 100 ಮೀಟರ್ ಹರ್ಡಲ್ಸ್ ನಲ್ಲಿ ಉನ್ನತಿ 13.73 ಸೆಕೆಂಡ್ಸ್ ನಲ್ಲಿ ಗುರಿ ತಲುಪಿ ದೇಶಕ್ಕೆ ಪದಕ ತಂದಿದ್ದಾರೆ.‌

ಈ ಹಿಂದೆ ವಿವಿಧ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕೂಡ ಉನ್ನತಿ ಉತ್ತಮ ಸಾಧನೆ ತೋರಿದ್ದು, ಹಲವು ಪದಕಗಳನ್ನು ಗಳಿಸಿದ್ದಾರೆ.

2021ರಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್‍ನಲ್ಲಿ ಉನ್ನತಿ ದೇಶದ ಹೆಸರಾಂತ ಕ್ರೀಡಾ ತಾರೆ ಪಿ.ಟಿ.ಉಷಾ ಅವರ ದಾಖಲೆಯನ್ನು ಮುರಿದು (80 ಮೀಟರ್ ಹರ್ಡಲ್ಸ್) ಹೆಸರು ಮಾಡಿದ್ದರು. ಇದೀಗ ಆಕೆಗೆ ಚೊಚ್ಚಲ ಅಂತರಾಷ್ಟ್ರೀಯ ಮಟ್ಟದ ಪದಕ ಲಭ್ಯವಾಗಿದೆ.

ಉನ್ನತಿ ಅವರು ಅಂತರಾಷ್ಟ್ರೀಯ ಅಥ್ಲೆಟ್ ಹಾಗೂ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಹಾಗೂ ಎರಡು ಬಾರಿಯ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ (ತಾಮನೆ - ಗುಡ್ಡಂಡ) ದಂಪತಿಯ ಪುತ್ರಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)