ಕ್ರೇನ್ ಢಿಕ್ಕಿ: ವೃದ್ಧ ಸಾವು
ಉಡುಪಿ : ಶುಕ್ರವಾರ ಸಂಜೆ ಕ್ರೇನ್ ಒಂದು ಅತೀ ವೇಗದಿಂದ ಚಲಿಸಿ ರಸ್ತೆಯ ಎಡ ಅಂಚಿನಲ್ಲಿ ನಡೆದುಕೊಂಡು ಹೋಗುತಿದ್ದ ವೃದ್ಧರೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಅಲೆವೂರು ಗ್ರಾಮದ ಮೂಡು ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಅಲೆವೂರು- ಕರ್ವಾಲು ರಸ್ತೆಯಲ್ಲಿ ನಡೆದಿದೆ.
ಮೃತರನ್ನು ನಾತು ಶೇರಿಗಾರ್ (೮೫) ಎಂದು ಗುರುತಿಸಲಾಗಿದೆ. ಕ್ರೇನ್ ಢಿಕ್ಕಿ ಹೊಡೆದು ಅದರ ಎದುರಿನ ಚಕ್ರ ನಾತು ಶೇರಿಗಾರ್ ಮೇಲೆ ಹರಿದು ಅವರು ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story