ಅಬುಧಾಬಿ | ಯೋಗೀಶ್ ಪ್ರಭುರಿಗೆ 'ಬಿಡಬ್ಲ್ಯುಎಫ್ ಸೋಶಿಯಲ್ ಸರ್ವಿಸ್ ಅವಾರ್ಡ್' ಪ್ರದಾನ
ಅಬುಧಾಬಿ, ಮೇ 22: ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ಅಬುಧಾಬಿ ಇದರ ವತಿಯಿಂದ ಸಮಾಜ ಸೇವಕ ಮತ್ತು ಇಂಡಿಯಾ ಸೋಶಿಯಲ್ ಸೆಂಟರ್, ಅಬುಧಾಬಿ ಇದರ ಅಧ್ಯಕ್ಷ ಕೆ.ಯೋಗೀಶ್ ಪ್ರಭು ಅವರಿಗೆ 'ಬಿಡಬ್ಲ್ಯುಎಫ್ ಸೋಶಿಯಲ್ ಸರ್ವಿಸ್ ಅವಾರ್ಡ್' ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರ್ ನಲ್ಲಿ ನಡೆದ ಸಮಾರಂಬದಲ್ಲಿ ಬಿಡಬ್ಲ್ಯುಎಫ್ ಪ್ರದಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಕಾರ್ಯಕ್ರಮ ನಿರ್ವಹಿಸಿ ಸನ್ಮಾನಿತರನ್ನು ಪರಿಚಯಿಸಿದರು. ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅವರು ಯೋಗಿಶ್ ರ ಸಮಾಜ ಸೇವೆಯನ್ನು ಅದರಲ್ಲೂ ಕೋವಿಡ್ ಸಮಯದಲ್ಲಿ ಕೈಗೊಂಡ ಪರಿಹಾರ ಕ್ರಮಗಳನ್ನು ಶ್ಲಾಘಿಸಿದರು.
ಬಿಡಬ್ಲ್ಯುಎಫ್ ಪದಾಧಿಕಾರಿಗಳು ಸ್ಮರಣಿಕೆ ನೀಡಿ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗೀಶ್, ತಮ್ಮ ಸಾಮಾಜಿಕ ಜೀವನ ಮತ್ತು ಪ್ರತಿಯೊಬ್ಬರಲ್ಲೂ ಇರಬೇಕಾದ ಸಾಮುದಾಯಿಕ ಬದ್ಧತೆಯ ಕುರಿತು ಮಾತನಾಡಿ, ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು.
ಬಿಡಬ್ಲ್ಯುಎಫ್ ಪದಾಧಿಕಾರಿಗಳಾದ ಹಮೀದ್ ಗುರುಪುರ, ಇಮ್ರಾನ್ ಅಹ್ಮದ್, ಅಬ್ದುಲ್ ಮಜೀದ್, ನವಾಝ್ ಅಹ್ಮದ್, ಅಬ್ದುಲ್ ಮುಜೀಬ್ ಉಚ್ಚಿಲ್ ಮತ್ತು ಐಎಸ್ ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.