ಕೋವಿಡ್ ಹೆಚ್ಚಳ: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ
ರಿಯಾದ್: ಕೋವಿಡ್-19 ಮತ್ತೆ ಹರಡುವಿಕೆ ಮತ್ತೆ ಆರಂಭಗೊಂಡ ಬಳಿಕ ಸೌದಿ ಅರೇಬಿಯಾ 'ತನ್ನ ನಾಗರಿಕರಿಗೆ' 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ. ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ್, ಭಾರತ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಮತ್ತು ವೆನೆಜುವೆಲಾ ದೇಶಗಳಿಗೆ ಸೌದಿ ನಾಗರಿಕರು ಪ್ರಯಾಣಿಸುವುದನ್ನು ನಿಷೇಧೀಸಲಾಗಿದೆ ಎಂದು gulfnews.com ವರದಿ ಮಾಡಿದೆ.
ಕಳೆದ ಕೆಲವು ವಾರಗಳಿಂದ COVID-19 ಸೋಂಕಿತರ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಿಷೇಧ ಹೇರಲ್ಪಟ್ಟಿದೆ. ಈ ನಡುವೆ, ಸೌದಿ ಅರೇಬಿಯಾದಲ್ಲಿ ಮಂಗನ ಕಾಯಿಲೆಯ ಯಾವುದೇ ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯವು ಸಾರ್ವಜನಿಕರಿಗೆ ಖಚಿತಪಡಿಸಿದೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ.
"ಮಂಕಿಪಾಕ್ಸ್" ನ ಶಂಕಿತ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆಹಚ್ಚಲು ಮತ್ತು ಸೋಂಕನ್ನು ಎದುರಿಸಲು ಆರೋಗ್ಯ ವಲಯವು ಸಮರ್ಥವಾಗಿದೆ ಎಂದು ಉಪ ಆರೋಗ್ಯ ಮಂತ್ರಿ ಡಾ. ಅಬ್ದುಲ್ಲಾ ಅಸಿರಿ ಹೇಳಿದ್ದಾರೆ.