varthabharthi


ಸಿನಿಮಾ

ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌ ರ ಸಿನಿಮಾವನ್ನು ಹಿಂದಿಕ್ಕಿದ ಕಾರ್ತಿಕ್‌ ಆರ್ಯನ್‌ ನಟನೆಯ ಭೂಲ್‌ ಭುಲಯ್ಯಾ-2

ವಾರ್ತಾ ಭಾರತಿ : 22 May, 2022

ಹೊಸದಿಲ್ಲಿ: ಸದ್ಯ ಬಾಲಿವುಡ್‌ ಹಲವು ಸ್ಟಾರ್‌ ನಟರುಗಳ ಮಧ್ಯೆ ಯುವನಟ ಕಾರ್ತಿಕ್‌ ಆರ್ಯನ್‌ ಭಾರೀ ಸದ್ದು ಮಾಡುತ್ತಿದ್ದಾರೆ. ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಭೂಲ್‌ಭುಲೈಯಾ-2 ಬಾಲಿವುಡ್‌ ನಲ್ಲಿ ಹಲವಾರು ದಿನಗಳಿಂದ ಭಾಗಶಃ ಖಾಲಿ ಬಿದ್ದಿದ್ದ ಬಾಕ್ಸ್‌ ಆಫೀಸ್‌ ಅನ್ನು ತುಂಬಿಸಿದೆ. ಆಲಿಯಾ ಭಟ್‌ ನಟನೆಯ ಗಂಗೂಬಾಯಿ ಕಾಥಿಯಾವಾಡಿ ಹಾಗೂ ಜಯೇಶ್‌ ಭಾಯ್‌ ಜೋರ್ಧಾರ್‌ ಸಿನಿಮಾಗಳನ್ನು ಕಲೆಕ್ಷನ್‌ ನಲ್ಲಿ ಹಿಂದಿಕ್ಕಿದೆ. ಮೊದಲ ದಿನವೇ ಬಾಕ್ಸ್‌ ಆಫೀಸ್‌ ನಲ್ಲಿ 14.11ಕೋಟಿ ರೂ. ಗಳಿಸಿದೆ.

ಕನ್ನಡದ ಕೆಜಿಎಫ್‌ ಸೇರಿದಂತೆ ಹಲವಾರು ಪ್ಯಾನ್‌ ಇಂಡಿಯಾ ಸಿನಿಮಾಗಳು ರಿಲೀಸ್‌ ಆಗುತ್ತಿರುವ ಕಾರಣದಿಂದ ಹಲವಾರು ದಿನಗಳಿಂದ ಬಾಲಿವುಡ್‌ ನ ಬಾಕ್ಸ್‌ ಆಫೀಸ್‌ ಖಾಲಿ ಬಿದ್ದಿತ್ತು. ಹಲವು ಚಿತ್ರಗಳು ಸಾಧಾರಣ ಗಳಿಕೆಗೆ ತೃಪ್ತಿಪಡುತ್ತಿತ್ತು. ಅಜಯ್ ದೇವಗನ್, ಜಾನ್ ಅಬ್ರಹಾಂ, ಅಕ್ಷಯ್ ಕುಮಾರ್, ಶಾಹಿದ್ ಕಪೂರ್ ಮುಂತಾದ ತಾರೆಯರ ಮೆಗಾ ಬಜೆಟ್‌ ನ ಚಿತ್ರಗಳು ಪೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ವಿಫಲವಾಗಿತ್ತು. 

ಭೂಲ್‌ಭುಲೈಯಾ-2 ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಾರ್ತಿಕ್‌ ಆರ್ಯನ್‌ ಕಂಡುಬರುತ್ತಾರೆ. ಉತ್ತಮ ನಟನೆಯೊಂದಿಗೆ ಪ್ರೇಕ್ಷಕರ ಮನಗೆಲ್ಲಲು ಅವರು ಸಫಲರಾಗಿದ್ದಾರೆ. ಕೋವಿಡ್‌ ನ ನಂತರ ಹಿಟ್‌ ಗಳ ಕೊರತೆಯಿದ್ದ ಬಾಲಿವುಡ್‌ ಗೆ ಮೊದಲ ದಿನವೇ ಉತ್ತಮ ಗಳಿಕೆ ತಂದುಕೊಟ್ಟು ಕೊಂಚ ಚೇತರಿಸುವಂತೆ ಈ ಸಿನಿಮಾ ಮಾಡಿದೆ. ಸದ್ಯ ಶೆಹಝಾದಾ, ಕ್ಯಾಪ್ಟನ್ ಇಂಡಿಯಾ, ಫ್ರೆಡ್ಡಿ ಮತ್ತು ಸಾಜಿದ್ ನಾಡಿಯಾಡ್ವಾಲಾ ರ ಮುಂದಿನ ಹೆಸರಿಡದ ಚಿತ್ರಗಳು ಕಾರ್ತಿಕ್‌ ಆರ್ಯನ್ ರ ಕೈಯಲ್ಲಿವೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)