varthabharthi


ಕರ್ನಾಟಕ

ಪಠ್ಯ ಪರಿಷ್ಕರಣೆಯಲ್ಲಿ ಗೊಂದಲ: ಸೋಮವಾರ ಸಾಹಿತಿಗಳ ಸಮಾಲೋಚನಾ ಸಭೆ

ವಾರ್ತಾ ಭಾರತಿ : 22 May, 2022

ಬೆಂಗಳೂರು, ಮೇ 22: ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಕೇಸರಿ ಪಠ್ಯಕ್ರಮ ಹಾಗೂ ಶಿಕ್ಷಣದ ಕೋಮುವಾದೀಕರಣ ವಿರೋಧಿಸಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯನ್ನು ನಾಳೆ(ಮೇ 23) ನಗರದ ಕೆಆರ್ ವೃತ್ತದ ಬಳಿಯ ಅಲುಮ್ನಿ ಹಾಲ್‍ನಲ್ಲಿ ಆಯೋಜಿಸಲಾಗಿದೆ. 

ಸಭೆಯಲ್ಲಿ ಚಿಂತಕ ಹಾಗೂ ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಪ್ರಾಧ್ಯಾಪಕ ಅಲ್ಲಮಪ್ರಭು ಬೆಟ್ಟದೂರು, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್, ಲೇಖಕಿ ಕೆ.ಶರೀಫಾ ಹಾಗೂ ಇನ್ನಿತರ ಸಾಹಿತಿಗಳು ಸೇರಿದಂತೆ ಎಸ್‍ಎಫ್‍ಐ, ಎನ್‍ಯುಎಸ್‍ಯು, ಕೆವಿಎಸ್ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)