"ಚೀನಾ ಆಕ್ರಮಣ ಮಾಡಿದರೆ ಅಮೆರಿಕಾ ತೈವಾನ್‌ನ ರಕ್ಷಣೆಗೆ ನಿಲ್ಲಲಿದೆ": ಎಚ್ಚರಿಕೆ ನೀಡಿದ ಜೋ ಬೈಡನ್
"ಚೀನಾ ಅಪಾಯದೊಂದಿಗೆ ಚೆಲ್ಲಾಟವಾಡುತ್ತಿದೆ"
ಟೋಕಿಯೊ: ಸ್ವಯಂ ಆಡಳಿತದ ದ್ವೀಪ ತೈವಾನ್ ಅನ್ನು ಚೀನಾ ಆಕ್ರಮಿಸಿದರೆ ಅಮೆರಿಕವು ಸೇನೆಯ ರೂಪದಲ್ಲಿ ತೈವಾನ್ ಅನ್ನು ರಕ್ಷಿಸುತ್ತದೆ. ಚೀನಾ "ಅಪಾಯದೊಂದಿಗೆ ಚೆಲ್ಲಾಟವಾಡುತ್ತಿದೆ" ಎಂದು ಅಧ್ಯಕ್ಷ ಜೋ ಬೈಡನ್ ಸೋಮವಾರ ಎಚ್ಚರಿಸಿದ್ದಾರೆ.
ತೈವಾನ್ ಅನ್ನು ಬಲವಂತವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ಚೀನೀ ಪ್ರಯತ್ನದ ವಿರುದ್ಧ ವಾಷಿಂಗ್ಟನ್ ಮಿಲಿಟರಿ ಮಧ್ಯಪ್ರವೇಶಿಸುತ್ತದೆಯೇ ಎಂದು ಬೈಡನ್ ರಲ್ಲಿ ಕೇಳಿದಾಗ "ಅದು ನಾವು ಮಾಡಿದ ಬದ್ಧತೆ" ಎಂದು ಅವರು ಹೇಳಿದರು.
"ನಾವು ಒಂದೇ ಚೀನಾ ನೀತಿಯನ್ನು ಒಪ್ಪಿಕೊಂಡಿದ್ದೇವೆ. ನಾವು ಅದಕ್ಕೆ ಸಹಿ ಹಾಕಿದ್ದೇವೆ ... ಆದರೆ ತೈವಾನ್ ಅನ್ನು ಬಲವಂತವಾಗಿ ತೆಗೆದುಕೊಳ್ಳಬಹುದೆಂಬ ಕಲ್ಪನೆಯು ಸೂಕ್ತವಲ್ಲ.ಇದು ಇಡೀ ಪ್ರದೇಶವನ್ನು ಸ್ಥಳಾಂತರಿಸುತ್ತದೆ ಹಾಗೂ ಉಕ್ರೇನ್‌ನಲ್ಲಿ ಏನಾಯಿತು ಅದು ಅಲ್ಲಿ ಸಂಭವಿಸುತ್ತದೆ’’ ಎಂದು ಬೈಡನ್ ಹೇಳಿದರು.
"ತೈವಾನ್‌ಗೆ ಸಂಬಂಧಿಸಿದಂತೆ ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅಧ್ಯಕ್ಷರು ಹೇಳಿದಂತೆ ನಮ್ಮ ನೀತಿ ಬದಲಾಗಿಲ್ಲ'' ಎಂದು ತೈವಾನ್ ದಾಳಿಗೆ ಒಳಗಾದರೆ ದ್ವೀಪ ರಾಷ್ಟ್ರವನ್ನು ರಕ್ಷಿಸಲು ಬಲವನ್ನು ಬಳಸುವ ಇಚ್ಛೆಯನ್ನು ಬೈಡನ್ ವ್ಯಕ್ತಪಡಿಸಿದ ನಂತರ ಹೆಸರು ಹೇಳಲು ಇಚ್ಛಿಸದ ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದರು.