PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ವಿಚಾರಣೆ ನಡೆಸಿದ ಸಿಐಡಿ
ಅಮೃತ್ ಪೌಲ್
ಬೆಂಗಳೂರು, ಮೇ 26: ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಐಡಿ ಅಧಿಕಾರಿಗಳು ಈ ಹಿಂದೆ ನೇಮಕಾತಿ ಎಡಿಜಿಪಿಯಾಗಿದ್ದ ಅಮೃತ್ಪೌಲ್ ಅವರ ವಿಚಾರಣೆ ನಡೆಸಿದರು ಎಂದು ವರದಿಯಾಗಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಡಿವೈಎಸ್ಪಿ ಆಗಿದ್ದ ಶಾಂತರಾಜು ಅನ್ನು ಸಿಐಡಿ ಬಂಧಿಸಿದ್ದು, ಆರೋಪಿಯೂ ನೀಡಿರುವ ಹೇಳಿಕೆ ಅನ್ವಯ ಗುರುವಾರ ಇಲ್ಲಿನ ಸಿಐಡಿ ಕಚೇರಿಯಲ್ಲಿ ಅಮೃತ್ಪೌಲ್ ಅವರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಅಮೃತ್ ಪೌಲ್ ಅವರೂ ಪಿಎಸ್ಸೈ ಪರೀಕ್ಷೆಯ ಹಗರಣದಲ್ಲಿ ಭಾಗಿಯಾಗಿರುವ ವಿಷಯ ಕೇಳಿಬಂದಿವೆ. ಅಷ್ಟೇ ಅಲ್ಲದೆ, ಬುಧವಾರ ಸಂಜೆಯೂ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ಗುರುವಾರ ಬೆಳಗ್ಗೆ ವಿಚಾರಣೆ ಮುಂದುವರೆಸಿದರು ಎಂದು ಮೂಲಗಳು ತಿಳಿಸಿವೆ.
Next Story