ಭೋಜಣ್ಣ ಆತ್ಮಹತ್ಯೆ ಪ್ರಕರಣದ ಆರೋಪಿ ಗಣೇಶ್ ಶೆಟ್ಟಿ ಸಿಎ ಅಲ್ಲ: ಸ್ಪಷ್ಟನೆ
ಮೊಳಹಳ್ಳಿ ಗಣೇಶ್ ಶೆಟ್ಟಿ
ಉಡುಪಿ : ಉದ್ಯಮಿ ಕಟ್ಟೆ ಗೋಪಾಲಕೃಷ್ಣ ಯಾನೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಅಕೌಂಟೆಂಟ್ ಆಗಿದ್ದಾರೆಯೇ ಹೊರತು ಲೆಕ್ಕಪರಿಶೋಧಕರು(ಸಿಎ) ಅಲ್ಲ ಎಂದು ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಆಫ್ ಇಂಡಿಯಾದ ಎಸ್ಐಆರ್ಸಿ ಉಡುಪಿ ಶಾಖೆ ಸ್ಪಷ್ಟನೆ ನೀಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಖೆಯ ಚೇಯರ್ಮೆನ್ ಲೋಕೇಶ್ ಶೆಟ್ಟಿ, ಜಿಲ್ಲೆಯ ಲೆಕ್ಕಪರಿಶೋಧಕರ ಸಂಪೂರ್ಣ ಮಾಹಿತಿ ನಮ್ಮ ಸಂಸ್ಥೆಯಲ್ಲಿದೆ. ಆದರೂ ಭಾರೀ ದೊಡ್ಡ ಪ್ರಮಾಣದಲ್ಲಿ ಲೆಕ್ಕಪರಿಶೋಧಕರ ಹೆಸರನ್ನು ದುರ್ಬಳಕೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್, ಸಿಎ ಅರ್ಚನಾ ಮಯ್ಯ, ರಂಗನಾಥ ಆಚಾರ್, ಮಹೇಂದ್ರ ಶೆಣೈ ಹಾಜರಿದ್ದರು.
Next Story