ತನ್ನ ಆರು ಮಕ್ಕಳನ್ನು ಬಾವಿಗೆ ಎಸೆದು ಕೊಂದ ತಾಯಿ !
ಮುಂಬೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸೋಮವಾರ ಮಹಿಳೆಯೊಬ್ಬರು ಐವರು ಬಾಲಕಿಯರು ಸೇರಿದಂತೆ ತನ್ನ ಆರು ಮಕ್ಕಳನ್ನು ಬಾವಿಗೆ ಎಸೆದಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
30 ವರ್ಷದ ಮಹಿಳೆ ತನ್ನ ಗಂಡನ ಕುಟುಂಬದ ಸದಸ್ಯರಿಂದ ಥಳಿತಕ್ಕೊಳಗಾದ ನಂತರ ಈ ಕೆಟ್ಟ ಹೆಜ್ಜೆ ಇಟ್ಟಿದ್ದಾಳೆ ಎಂದು ಅವರು ಹೇಳಿದರು.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಮಕ್ಕಳು 18 ತಿಂಗಳಿಂದ 10 ವರ್ಷದೊಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story