ರಾಹುಲ್ ಗಾಂಧಿ ವಿನಂತಿಯ ನಂತರ ವಿಚಾರಣೆ ದಿನಾಂಕ ಮುಂದೂಡಿದ ಈಡಿ
Photo:PTI
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 13ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ (ಈಡಿ) ತಿಳಿಸಿದೆ. ರಾಹುಲ್ ಗಾಂಧಿ ತಮ್ಮ ವಿದೇಶಿ ಪ್ರವಾಸವನ್ನು ಉಲ್ಲೇಖಿಸಿ ಹೊಸ ದಿನಾಂಕವನ್ನು ಕೋರಿದ ನಂತರ ಈಡಿ ವಿಚಾರಣೆಯನ್ನು ಮುಂದೂಡಿದೆ.
ಈ ಹಿಂದೆ ಜೂನ್ 2 ರಂದು ತನಿಖೆಗೆ ಹಾಜರಾಗುವಂತೆ ರಾಹುಲ್ ಗೆ ಕೇಳಲಾಗಿತ್ತು. ಅವರು ಪ್ರಸ್ತುತ ವಿದೇಶಿ ಪ್ರವಾಸದಲ್ಲಿರುವುದರಿಂದ ದಿನಾಂಕವನ್ನು ಮುಂದೂಡುವಂತೆ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದರು.ರಾಹುಲ್ ಗಾಂಧಿ ಅವರು ಜೂನ್ 5 ರಂದು ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ.
ಏತನ್ಮಧ್ಯೆ, ನಿನ್ನೆ ಕೋವಿಡ್ -19 ಸೋಂಕಿಗೆ ಒಳಗಾಗಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜೂನ್ 8 ರಂದು ಕೇಂದ್ರ ದಿಲ್ಲಿಯಲ್ಲಿರುವ ಫೆಡರಲ್ ಏಜೆನ್ಸಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ.
Next Story