ಲಾರ್ಡ್ಸ್ ಟೆಸ್ಟ್ ನಲ್ಲಿ ಪುನರಾವರ್ತನೆಗೊಂಡ 2019ರ ವಿಶ್ವಕಪ್ ಫೈನಲ್ ಪಂದ್ಯದ ಕ್ಷಣ !
ಲಂಡನ್: ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ನಡುವೆ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನ 43 ನೇ ಓವರ್‌ನಲ್ಲಿ ರೋಚಕ ಕಾಕತಾಳೀಯ ಘಟನೆಯೊಂದು ನಡೆಯಿತು. ಈ ಘಟನೆಯು ಇಂಗ್ಲೆಂಡ್-ನ್ಯೂಝಿಲ್ಯಾಂಡ್ ನಡುವೆ ನಡೆದಿದ್ದ 2019 ರ ವಿಶ್ವಕಪ್ ಫೈನಲ್ ಹಾಗೂ ಕೊನೆಯ ಓವರ್ ನಾಟಕೀಯ ಸನ್ನಿವೇಶವನ್ನು ನೆನಪಿಸಿತು.
ಬೌಲ್ಟ್ ಎಸೆದ 43 ನೇ ಓವರ್‌ನ ಮೊದಲ ಎಸೆತದಲ್ಲಿ ಜೋ ರೂಟ್ ಪುಲ್ ಶಾಟ್ ಆಡಿದರು. ರೂಟ್ ಹಾಗೂ ಸ್ಟೋಕ್ಸ್ ಇಬ್ಬರೂ ಸಿಂಗಲ್ ರನ್ ಪಡೆಯಲು ಮುಂದಾದರು. ಆದರೆ ಫೀಲ್ಡರ್ ತ್ವರಿತವಾಗಿ ಚೆಂಡನ್ನು ನಾನ್ ಸ್ಟ್ರೈಕ್ ನತ್ತ ಎಸೆದರು. ಆಗ ಕ್ರೀಸ್ ಮಧ್ಯೆ ತೆರಳಿದ್ದ ಸ್ಟೋಕ್ಸ್ ರನೌಟಾಗುವ ಭಯದಲ್ಲಿ ನಾನ್-ಸ್ಟ್ರೈಕರ್‌ನ ಅಂತ್ಯಕ್ಕೆ ಮರಳಲು ಯತ್ನಿಸಿದರು. ಆಗ ಚೆಂಡು ಸ್ಟೋಕ್ಸ್ ಅವರ ಬ್ಯಾಟ್ ಗೆ ತಗಲಿತು. ಆಗ ಬೌಲ್ಟ್ ಹಾಗೂ ಸ್ಟೋಕ್ಸ್ ಮುಖದಲ್ಲಿ ನಗು ಕಂಡು ಬಂತು.ಈ ಘಟನೆಯು 2019ರ ರೋಚಕ ವಿಶ್ವಕಪ್ ನ್ನು ನೆನಪಿಸಿತು. ಈ ವೇಳೆ ತಮ್ಮ ಕೈಗಳನ್ನು ಎತ್ತಿದ ಸ್ಟೋಕ್ಸ್ ಹಾಗೂ ರೂಟ್ 2019 ರ ವಿಶ್ವಕಪ್ ಫೈನಲ್ ನಲ್ಲಿ ಸ್ಟೋಕ್ಸ್‌ನ ಪ್ರತಿಕ್ರಿಯೆಯನ್ನು ಪುನರಾವರ್ತಿಸಿದರು.
2019 ರ ವಿಶ್ವಕಪ್ ಫೈನಲ್‌ನ ಅಂತಿಮ ಓವರ್‌ನಲ್ಲಿ , ಸ್ಟೋಕ್ಸ್ ಅವರು ಡೀಪ್ ಮಿಡ್-ವಿಕೆಟ್ ನತ್ತ ಚೆಂಡನ್ನು ಅಟ್ಟಿದ್ದರು. ಚೆಂಡನ್ನು ತಡೆದ ಮಾರ್ಟಿನ್ ಗಪ್ಟಿಲ್ ಅದನ್ನು ಕೀಪರ್ ನತ್ತ ಎಸೆದರು. ಸ್ಟೋಕ್ಸ್ ಕ್ರೀಸ್ ತಲುಪಲು ಡೈವ್ ಮಾಡಿದರು. ಆಗ ಗಪ್ಟಿಲ್ ಎಸೆದಿದ್ದ ಚೆಂಡು ಸ್ಟೋಕ್ಸ್ ಅವರ ಬ್ಯಾಟ್ ಗೆ ತಗಲಿ ಬೌಂಡರಿಯತ್ತ ಓಡಿತು. ಅಂತಿಮವಾಗಿ ಇಂ ಗ್ಲೆಂಡ್ ಆರು ರನ್ ಗಳಿಸಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 277 ರನ್‌ಗಳನ್ನು ಬೆನ್ನಟ್ಟುತ್ತಿರುವ ಆತಿಥೇಯ ಇಂಗ್ಲೆಂಡ್ ಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಕೇವಲ 61 ರನ್‌ಗಳ ಅಗತ್ಯವಿದೆ. ಸದ್ಯ ಇಂಗ್ಲೆಂಡ್ ಪರ ಜೋ ರೂಟ್ (77*) ಮತ್ತು ಬೆನ್ ಫೋಕ್ಸ್ (9*) ಅಜೇಯರಾಗಿದ್ದಾರೆ.
ಈ ಟೆಸ್ಟ್‌ನಲ್ಲಿ ಸ್ಟೋಕ್ಸ್ 110 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 54 ರನ್ ಗಳಿಸಿದ್ದಾರೆ.
If you know, you know
— England Cricket (@englandcricket) June 4, 2022
#ENGvNZ pic.twitter.com/ZyIcvwkk8B
Spoiler..#savesoil pic.twitter.com/F55z7GfjwT
— Prateek #savesoil (@Prateeeeeeee) June 5, 2022