ಮಲ್ಪೆ; ಮಹಿಳೆಗೆ ಚಿತ್ರಹಿಂಸೆ ಆರೋಪ : ಯುವಕನ ವಿರುದ್ಧ ಪ್ರಕರಣ ದಾಖಲು
ಮಲ್ಪೆ : ಮಹಿಳೆಗೆ ಚಿತ್ರಹಿಂಸೆ ನೀಡುತ್ತಿದ್ದ ಆರೋಪದಲ್ಲಿ ಯುವಕನ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ಬಾಪುತೋಟದಲ್ಲಿ ವಾಸವಾಗಿರುವ ಸಂಗೀತಾ (31) ಎಂಬವರಿಗೆ ಇಬ್ಬರು ಮಕ್ಕಳಿದ್ದು, 10 ವರ್ಷಗಳ ಹಿಂದೆ ಗಂಡ ಬಿಟ್ಟು ಹೋಗಿದ್ದಾನೆ. ಈಕೆಗೆ 9 ವರ್ಷಗಳಿಂದ ಕೊಪ್ಪಳದ ಹಾಲಪ್ಪ ಎಂಬಾತನ ಪರಿಚಯವಿದ್ದು ಆತ ಪ್ರತಿ ದಿನ ರೂಮಿಗೆ ಬಂದು, ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ರೂಮಿಗೆ ಬಂದ ಹಾಲಪ್ಪ, ಸಂಗೀತಾ ಅವರನ್ನು ಕೂಡಿಹಾಕಿ ಕೈಯನ್ನು ಕಟ್ಟಿ ಬಾಯಿಗೆ ಬಟ್ಟೆ ಇಟ್ಟು ಸೌಟನ್ನು ಬಿಸಿ ಮಾಡಿ ಕೈ ಬೆರಳು ಹಾಗೂ ಕಾಲುಗಳಿಗೆ ಬರೆ ಹಾಕಿ ಸುಟ್ಟಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story