ಅರಬ್ ದೇಶಗಳಿಗೆ 3 ಮಿಲಿಯನ್ ಪುಸ್ತಕ ವಿತರಿಸಲು ಯುಎಇ ಪ್ರಧಾನಿ ಆದೇಶ
PHOTO: TWITTER/@HHShkMohd
ಅಬುಧಾಬಿ, ಜೂ.14: ಅರಬ್ ದೇಶಗಳ ಸಾವಿರಾರು ಶಾಲೆಗಳಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ 3 ಮಿಲಿಯನ್ ಪುಸ್ತಕಗಳನ್ನು ವಿತರಿಸುವಂತೆ ಯುಎಇ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶಿದ್ ಅಲ್ ಮಕ್ತೂಮ್ ಆದೇಶಿಸಿದ್ದಾರೆ.
ಈ ವಲಯದ ಅತ್ಯಂತ ಬೃಹತ್ ವಾಚನಾಲಯ ‘ದಿ ಡಿಎಚ್1-ಬಿಲಿಯನ್ ಮುಹಮ್ಮದ್ ಬಿನ್ ರಾಶಿದ್ ಲೈಬ್ರೆರಿ’ ಯನ್ನು ದುಬೈಯ ಕ್ರೀಕ್ ಬ್ಯಾಂಕ್ನಲ್ಲಿ ಸೋಮವಾರ ಅವರು ಉದ್ಘಾಟಿಸಿದ್ದು ಮರುದಿನ ಅವರು ಈ ಘೋಷಣೆ ಮಾಡಿದ್ದಾರೆ. ಜೂನ್ 16ರಿಂದ ಲೈಬ್ರೆರಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುತ್ತದೆ. ಅಲ್ಲದೆ ಮುಂಬರುವ ಅರಬ್ ಓದುವಿಕೆ ಸ್ಪರ್ಧೆಯಲ್ಲಿ 22 ಮಿಲಿಯನ್ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
أول وصية من السماء للأرض هي كلمة "إقرأ" .. الاقتصاد بحاجة للمعرفة، والسياسة بحاجة للحكمة، والأمم بحاجة للعلم .. وكل ذلك موجود في الكتاب .. ولدينا اليوم صرح لملايين الكتب نضمن به تطوير مسيرتنا التنموية..وحياة وفكر أجيالنا .. pic.twitter.com/G07dYqJwzt
— HH Sheikh Mohammed (@HHShkMohd) June 13, 2022