ಡಿವೈಡರಿಗೆ ಢಿಕ್ಕಿ: ಬೈಕ್ ಸವಾರ ಮೃತ್ಯು
ಮಣಿಪಾಲ : ಮೋಟಾರು ಸೈಕಲ್ ಡಿವೈಡರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ವಿದ್ಯಾರ್ಥಿನಿ ವಾಹನ ಸಮೇತ ರಸ್ತೆಗೆ ಬಿದ್ದು ತೀವ್ರಗಾಯದಿಂದ ಮೃತ ಪಟ್ಟ ಘಟನೆ ಬುಧವಾರ ಮದ್ಯರಾತ್ರಿ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಡೆದಿದೆ.
ಮೃತರನ್ನು ಹಿಂದುಜಾ ಎಂದು ಗುರುತಿಸಲಾಗಿದೆ. ಹಿಂದುಜಾ ಅವರು ವರ್ಷಿಣಿಯವರನ್ನು ಹಿಂಬದಿ ಸವಾರಳಾಗಿ ಕುಳ್ಳಿರಿಸಿಕೊಂಡು ರಾತ್ರಿ ೧೨:೨೦ರ ಸುಮಾರಿಗೆ ಟೈಗರ್ ಸರ್ಕಲ್ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆ ರಾ.ಹೆದ್ದಾರಿ ೬೯ ಎಯಲ್ಲಿ ವೇಗವಾಗಿ ಹೋಗುತ್ತಿರುವಾಗ ಟೆಂಪೂ ನಿಲ್ದಾಣದ ಬಳಿ ವಾಹನದ ಹತೋಟಿ ಕಳೆದುಕೊಂಡು ಬಲಬದಿಯ ಡಿವೈಡರ್‌ಗೆ ಢಿಕ್ಕಿ ಹೊಡೆದಿತ್ತು.
ಇದರಿಂದ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆ ಹಿಂಬದಿ ತೀವ್ರವಾಗಿ ಗಾಯಗೊಂಡ ಹಿಂದುಜಾ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದರು. ವರ್ಷಿಣಿಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story