ವಿದ್ಯುದ್ದೀಕರಣಗೊಂಡ ಕೊಂಕಣ ರೈಲ್ವೆ ಮಾರ್ಗ; ಜೂ. 20ರಂದು ಬೆಂಗಳೂರಿನಲ್ಲಿ ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಣೆ
ಪ್ರಧಾನಿ ನರೇಂದ್ರ ಮೋದಿ
ಉಡುಪಿ, ಜೂ.18: ಶೇ.100ರಷ್ಟು ವಿದ್ಯುದ್ದೀಕರಣಗೊಂಡಿರುವ ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರುವರೆಗಿನ ೭೩೮.೯ಕಿ.ಮೀ. ಉದ್ದದ ಕೊಂಕಣ ರೈಲ್ವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂ.20ರ ಸೋಮವಾರ ಅಪರಾಹ್ನ 1.30ಕ್ಕೆ ಬೆಂಗಳೂರಿನಿಂದ ಹಸಿರು ನಿಶಾನೆ ತೋರುವ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರತ್ನಗಿರಿ, ಮಡಗಾಂವ್ ಹಾಗೂ ಉಡುಪಿಯಿಂದಲೂ ವಿದ್ಯುತ್ ಚಾಲಿತ ರೈಲಿಗೆ ಚಾಲನೆ ನೀಡಲಾಗುವುದು.
ಬೆಂಗಳೂರಿನಿಂದ ಪ್ರಧಾನಿ ಅವರು ರಿಮೋಟ್ ನಿಯಂತ್ರಣದ ಮೂಲಕ ಉಡುಪಿ ರೈಲು ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೀಡುವರು ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ. ೧೨೮೭ ಕೋಟಿ ರೂ.ವೆಚ್ಚದಲ್ಲಿ ಐದು ವರ್ಷಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
Next Story