ಪರಿಶಿಷ್ಟ ಜಾತಿ ಮೀನುಗಾರರಿಗೆ ದೋಣಿ, ಸಲಕರಣೆ ವಿತರಣೆ
ಮಲ್ಪೆ : ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆ ಯಡಿ ೨೦೨೧-೨೨ನೆ ಸಾಲಿನಲ್ಲಿ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸಲಕರಣೆಗಳನ್ನು ಬುಧವಾರ ಹಸ್ತಾಂತರಿಸಲಾಯಿತು.
೪ ಫಲಾನುಭವಿಗಳಿಗೆ ತಲಾ ೩,೬೦,೦೦೦ರೂ.ನಂತೆ ಒಟ್ಟು ೧೪,೪೦,೦೦೦ರೂ. ವೆಚ್ಚದಲ್ಲಿ ಎಫ್ಆರ್ಪಿ ದೋಣಿ, ಇಂಜಿನ್, ಬಲೆ, ಸಲಕರಣೆ, ಲೈಫ್ಬಾಯ್, ಲೈಫ್ ಜಾಕೆಟ್ ಹಾಗೂ ಐಸ್ಬಾಕ್ಸ್ಗಳನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಉಪ ನಿರ್ದೇಶಕ ಶಿವಕುಮಾರ್ ಜಿ.ಎಂ., ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಹಾಗೂ ಇಲಾಖಾ ಸಿಬ್ಬಂದಿ ರವಿಕುಮಾರ್ ಉಪಸ್ಥಿತರಿದ್ದರು.
Next Story