varthabharthi


ರಾಷ್ಟ್ರೀಯ

ಏಕನಾಥ್ ಶಿಂಧೆ ಬಣ ಸೇರಿದ ಮತ್ತೆ ಮೂವರು ಶಾಸಕರು

ವಾರ್ತಾ ಭಾರತಿ : 23 Jun, 2022

Photo: PTI

ಮುಂಬೈ: ಶಿವಸೇನೆಯ ಮತ್ತೆ ಮೂವರು ಶಾಸಕರು ಮುಂಬೈಯಿಂದ ಗುವಾಹಟಿಗೆ ತೆರಳಿ ಬಂಡಾಯದ ಕೇಂದ್ರ ಬಿಂದುವಾಗಿರುವ ಹಿರಿಯ ನಾಯಕ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಇದೀಗ ಶಿಂಧೆ ಪಾಳಯದಲ್ಲಿ 36 ಶಾಸಕರು (ಪಕ್ಷದ 55 ಶಾಸಕರಲ್ಲಿ) ಇದ್ದಾರೆ.

ದೀಪಕ್ ಕೇಸಕರ್ (ಸಾವಂತವಾಡಿ ಶಾಸಕ), ಮಂಗೇಶ್ ಕುಡಾಲ್ಕರ್ (ಚೆಂಬೂರ್ ಶಾಸಕ) ಹಾಗೂ  ಸದಾ ಸರ್ವಾಂಕರ್ (ದಾದರ್ ಶಾಸಕ) ಅವರು ಮುಂಬೈನಿಂದ ಗುವಾಹಟಿಗೆ ಬೆಳಗ್ಗಿನ ವಿಮಾನದಲ್ಲಿ ತೆರಳಿದರು ಎಂದು NDTV ವರದಿ ಮಾಡಿದೆ.

ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆಯನ್ನು ಎದುರಿಸದೆ ಪಕ್ಷವನ್ನು ವಿಭಜಿಸಲು ಏಕನಾಥ ಶಿಂಧೆ ಪಾಳಯಕ್ಕೆ ಈಗ ಕೇವಲ ಓರ್ವ ಶಾಸಕನ ಅಗತ್ಯವಿದೆ. ಐವರು ಪಕ್ಷೇತರ ಶಾಸಕರು ಶಿಂಧೆ ಅವರ ಜೊತೆಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)