varthabharthi


ಅಂತಾರಾಷ್ಟ್ರೀಯ

ಅಮೆರಿಕ: ಉನ್ನತ ಹುದ್ದೆಗೆ ಭಾರತೀಯ ಮೂಲದ‌ ಕಾನೂನು ತಜ್ಞೆ ಅಂಜಲಿ ಚತುರ್ವೇದಿ ನೇಮಕ

ವಾರ್ತಾ ಭಾರತಿ : 23 Jun, 2022

ವಾಷಿಂಗ್ಟನ್, ಜೂ.24: ಭಾರತೀಯ ಅಮೆರಿಕನ್ ಕಾನೂನು ತಜ್ಞೆ ಅಂಜಲಿ ಚತುರ್ವೇದಿಯನ್ನು ಅಮೆರಿಕದ ಮಾಜಿ ಸೈನಿಕರ ವ್ಯವಹಾರ ಇಲಾಖೆಯ ಪ್ರಧಾನ ಸಲಹೆಗಾರರನ್ನಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ ಎಂದು ವರದಿಯಾಗಿದೆ.

ಈಗ ಅಮೆರಿಕದ ನ್ಯಾಯ ಇಲಾಖೆಯ ಕ್ರಿಮಿನಲ್ ವಿಭಾಗದಲ್ಲಿ ಅವರು ಡೆಪ್ಯುಟಿ ಅಸಿಸ್ಟೆಂಟ್ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಲಂಬಿಯಾ ಜಿಲ್ಲೆ ಮತ್ತು ಕ್ಯಾಲಿಫೋರ್ನಿಯಾದ ಉತ್ತರದ ಜಿಲ್ಲೆಯಲ್ಲಿನ ಅಟಾರ್ನಿ ಕಚೇರಿಯಲ್ಲಿ ಕಾರ್ಐನಿರ್ವಹಿಸಿದ್ದ ಅಂಜಲಿ ಸರಕಾರಿ ಹಾಗೂ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕಾನೂನು ತಜ್ಞೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ನ್ಯೂಯಾರ್ಕ್ನಲ್ಲಿ ಜನಿಸಿರುವ ಅವರು, ಜಾರ್ಜ್ಟೌನ್ ವಿವಿ ಲಾ ಸ್ಕೂಲ್ ಮತ್ತು ಕಾರ್ನೆಲ್ ವಿವಿಯಿಂದ ಪದವಿ ಪಡೆದಿದ್ದಾರೆ. ಜತೆಗೆ ಪ್ರಮಾಣೀಕೃತ ಯೋಗ ಶಿಕ್ಷಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)