ಕಸಬಾ ಬಜಾರ್: ಮೊಬೈಲ್ ಟವರ್ ಕಳವು
ಮಂಗಳೂರು : ನಗರದ ಕಸಬಾ ಬಜಾರ್ ಬಳಿ ಕಂಪೆನಿಯೊಂದು ಅಳವಡಿಸಿದ್ದ ಮೊಬೈಲ್ ಟವರ್ ಕಳವಾಗಿದೆ ಎಂದು ಕಂಪೆನಿಯ ಪ್ರತಿನಿಧಿಯು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿ. ೨೦೦೯ರ ಎ.೬ರಂದು ನಗರದ ಕಸಬಾ ಬಜಾರ್ನ ಸೈಟ್ ವೊಂದರಲ್ಲಿ ಮೊಬೈಲ್ ಟವರ್ ಅಳವಡಿಸಿತ್ತು. ಕಂಪೆನಿಯ ಟೆಕ್ನಿಷಿಯನ್ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ೨೨,೪೫,೩೩೯ ರೂ. ಮೌಲ್ಯದ ಮೊಬೈಲ್ ಟವರ್ ಕಳವಾಗಿತ್ತು ಎಂದು ಕಂಪೆನಿಯ ಪ್ರತಿನಿಧಿ ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ.
Next Story