varthabharthi


ರಾಷ್ಟ್ರೀಯ

'ಯಾರನ್ನೂ ಬಿಡುವುದಿಲ್ಲ': ಬಂಡಾಯ ಶಾಸಕ ತಾನಾಜಿ ಸಾವಂತ್‌ ಕಚೇರಿ ಧ್ವಂಸಗೊಳಿಸಿದ ಶಿವಸೇನೆ ಕಾರ್ಯಕರ್ತರು

ವಾರ್ತಾ ಭಾರತಿ : 25 Jun, 2022

Screengrab(Twitter/@ANI)

ಮುಂಬೈ: ಪುಣೆಯಲ್ಲಿರುವ ಬಂಡಾಯ  ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಶನಿವಾರ ಧ್ವಂಸಗೊಳಿಸಿದ್ದಾರೆ.

ಪ್ರಸ್ತುತ ಗುವಾಹಟಿಯಲ್ಲಿ ಏಕನಾಥ್ ಶಿಂಧೆ ಅವರೊಂದಿಗೆ ಸೇರಿಕೊಂಡಿರುವ  ಸಾವಂತ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಶಿವಸೇನಾ ಕಾರ್ಯಕರ್ತರು ಕಿಟಕಿಯ ಗಾಜುಗಳನ್ನು ಒಡೆಯುತ್ತಿರುವುದು ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊದಲ್ಲಿ ಕಂಡುಬಂದಿದೆ.

 “ನಮ್ಮ ಪಕ್ಷದ ಕಾರ್ಯಕರ್ತರು  ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದರು. ನಮ್ಮ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಈ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ. ಅವರ ಕಚೇರಿಯ ಮೇಲೂ ದಾಳಿ ನಡೆಸಲಾಗುವುದು. ಯಾರನ್ನೂ ಬಿಡುವುದಿಲ್ಲ'' ಎಂದು ಶಿವಸೇನೆಯ ಪುಣೆ ನಗರ ಮುಖ್ಯಸ್ಥ ಸಂಜಯ್ ಮೋರೆ ಎಎನ್‌ಐಗೆ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)