ಮಲ್ಪೆ ನ್ಯಾಷನಲ್ ವಿಮನ್ಸ್ ಫ್ರಂಟ್‌ನಿಂದ ರಕ್ತದಾನ ಶಿಬಿರ
ಮಲ್ಪೆ, ಜೂ.೨೫: ನ್ಯಾಷನಲ್ ವಿಮನ್ಸ್ ಫ್ರಂಟ್ ಮಲ್ಪೆ ಘಟಕದ ವತಿಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವನ್ನು ಜೂ.೨೫ರಂದು ಮಲ್ಪೆಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ನ್ಯಾಷನಲ್ ವಿಮನ್ಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷೆ ರಹಮತುನ್ನೀಸ ವಹಿಸಿದ್ದರು. ಅತಿಥಿಗಳಾಗಿ ನ್ಯಾಷನಲ್ ವಿಮನ್ಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ನಸೀಮಾ ಜುರೈ, ಯುವ ವೈದ್ಯೆ ಡಾ. ನಸೂಹಾ ಮಲ್ಪೆ, ಕೆಎಂಸಿ ರಕ್ತ ನಿಧಿ ಅಧಿಕಾರಿ ಡಾ.ಆನ್ಸಿ, ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ಸದಸ್ಯೆ ನಿಧಾ ಅಫ್ರಾ ಭಾಗವಹಿಸಿದ್ದರು.
ಸಮ್ರೀನ್ ಅಫ್ರೋಝ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು ೫೦ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
Next Story