ಕಾರ್ಕಳ : ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಮಿಯಾರು ಗ್ರಾಮದ ಗುಂಡಾಜೆ ನಿವಾಸಿ ರಾಘವೇಂದ್ರ ನಾಯಕ್(೫೬) ಎಂಬವರು ಕುಡಿತದ ಬಗ್ಗೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಜೂ.೨೪ರಂದು ಸಂಜೆ ಮನೆಯ ಬಾತ್ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.