varthabharthi


ಅಂತಾರಾಷ್ಟ್ರೀಯ

ಕ್ಯೂಬಾ: ಇಬ್ಬರು ಕಲಾವಿದರಿಗೆ ಜೈಲುಶಿಕ್ಷೆ

ವಾರ್ತಾ ಭಾರತಿ : 25 Jun, 2022

ಹವಾನ, ಜೂ.25: ಕ್ಯೂಬಾದ ಇಬ್ಬರು ಭಿನ್ನಮತೀಯ ಕಲಾವಿದರಿಗೆ ಜೈಲುಶಿಕ್ಷೆ ವಿಧಿಸಿ ಅಲ್ಲಿನ ನ್ಯಾಯಾಲಯ ತೀರ್ಪು ನೀಡಿರುವುದಾಗಿ ಸರಕಾರ ಘೋಷಿಸಿದೆ. ಇದೊಂದು ವಾಕ್ಸ್ವಾತಂತ್ರ್ಯವನ್ನು ಉಲ್ಲಂಘಿಸಿದ ತೀರ್ಪು ಎಂದು ಮಾನವ ಹಕ್ಕುಗಳ ಗುಂಪು ಖಂಡಿಸಿದೆ. ಸರಕಾರದ ವಿರುದ್ಧ ಹಲವು ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಹವಾನಾ ಮೂಲದ, ಕಲಾವಿದರ ಒಕ್ಕೂಟ ‘ ಸ್ಯಾನ್ ಇಸಿದ್ರೊ’ ಅಭಿಯಾನದ ಪ್ರಮುಖ ಸದಸ್ಯರಾಗಿರುವ ಲೂಯಿಸ್ ಮ್ಯಾನುವೆಲ್ ಮತ್ತು ಮೇಕಲ್ ಕ್ಯಾಸ್ಟಿಲೊ ಶಿಕ್ಷೆಗೆ ಒಳಗಾದವರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಮತ್ತು ಸಾರ್ವಜನಿಕ ಶಾಂತಿ ಕದಡಿದ ಅಪರಾಧಕ್ಕೆ ಲೂಯಿಸ್ಗೆ 5 ವರ್ಷದ ಜೈಲುಶಿಕ್ಷೆ, ಇದೇ ಅಪರಾಧಕ್ಕೆ ಕ್ಯಾಸ್ಟಿಲೋಗೆ 9 ವರ್ಷ ಜೈಲುಶಿಕ್ಷೆ ಘೋಷಿಸಲಾಗಿದೆ. ಇದನ್ನು ಖಂಡಿಸಿರುವ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್, ತಕ್ಷಣವೇ ಇಬ್ಬರೂ ಕಲಾವಿದರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ನ್ಯಾಯಾಲಯದ ತೀರ್ಪು ಅಭಿವ್ಯಕ್ತಿ ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ಮುಕ್ತವಾಗಿ ಉಲ್ಲಂಘಿಸಿದ ತೀರ್ಪು ಎಂದು ಮಾನವ ಹಕ್ಕು ನಿಗಾ ಸಮಿತಿಯ ಸದಸ್ಯ ಜುವಾನ್ ಪಾಪ್ಪಿಯರ್ ಪ್ರತಿಕ್ರಿಯಿಸಿದ್ದಾರೆ.‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)