varthabharthi


ರಾಷ್ಟ್ರೀಯ

ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ವಾರ್ತಾ ಭಾರತಿ : 26 Jun, 2022

Photo: Twitter/@ndtv

ಲಕ್ನೊ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ರವಿವಾರ ಬೆಳಗ್ಗೆ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ  ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಇಲ್ಲಿಂದ (ವಾರಣಾಸಿ) ಲಕ್ನೊಗೆ ಟೇಕಾಫ್ ಆದ ನಂತರ ಮುಖ್ಯಮಂತ್ರಿಯ ಹೆಲಿಕಾಪ್ಟರ್‌ಗೆ ಹಕ್ಕಿಯೊಂದು ಬಡಿದಿದೆ.  ಹೀಗಾಗಿ ಹೆಲಿಕಾಪ್ಟರ್  ಇಲ್ಲಿ ಇಳಿಯಬೇಕಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲರಾಜ್ ಶರ್ಮಾ ಹೇಳಿದರು.

ರಸ್ತೆ ಮಾರ್ಗದಲ್ಲಿ ಎಲ್ ಬಿಎಸ್ ಐ ವಿಮಾನ ನಿಲ್ದಾಣಕ್ಕೆ ತೆರಳಿದ ಆದಿತ್ಯನಾಥ್ ವಿಮಾನದ ಮೂಲಕ ಲಕ್ನೊಗೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)