varthabharthi


ರಾಷ್ಟ್ರೀಯ

ಉಪಚುನಾವಣೆ: ಭಗವಂತ್ ಮಾನ್ ಪ್ರತಿನಿಧಿಸುತ್ತಿದ್ದ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ ಆಪ್ ಗೆ ಸೋಲು

ವಾರ್ತಾ ಭಾರತಿ : 26 Jun, 2022

ಭಗವಂತ್ ಮಾನ್ (PTI)

 ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಂದ ತೆರವಾದ  ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ನಡೆದ  ಉಪ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ(ಅಮೃತಸರ)  ನಾಯಕ ಸಿಮ್ರಾನ್ ಜಿತ್ ಸಿಂಗ್ ಮಾನ್ 7,052 ಮತಗಳಿಂದ  ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಭಾರೀ ಹಿನ್ನಡೆ ಅನುಭವಿಸಿದೆ.

ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರು 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರವನ್ನು ಗೆದ್ದಿದ್ದರು.

77 ವರ್ಷದ ಸಿಮ್ರಾನ್ ಜಿತ್ ಸಿಂಗ್ ಮಾನ್ ಅವರು ಮಾಜಿ ಸಂಸದರಾಗಿದ್ದು,  ಶಿರೋಮಣಿ ಅಕಾಲಿದಳದ (ಅಮೃತಸರ) ಅಧ್ಯಕ್ಷರಾಗಿದ್ದಾರೆ .  

ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಹಾಗೂ  ಅಕಾಲಿದಳದ ಕಮಲದೀಪ್ ಕೌರ್ ರಾಜೋನಾ ಕ್ರಮವಾಗಿ ಮೂರು, ನಾಲ್ಕು ಹಾಗೂ  ಐದನೇ ಸ್ಥಾನದಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)