varthabharthi


ಕರ್ನಾಟಕ

ಆರೆಸ್ಸೆಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್: ಕುಮಾರಸ್ವಾಮಿ ಆರೋಪ

ವಾರ್ತಾ ಭಾರತಿ : 26 Jun, 2022

ಶಿವಮೊಗ್ಗ, ಜೂ.26:  ಆರೆಸ್ಸೆಸ್ ​​ನ ಎರಡ್ಮೂರು ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಶಾಸಕರು, ಮಂತ್ರಿಗಳು ಎಲ್ಲರೂ ಪ್ರತಿ ಕೆಲಸದ ಕಮಿಷನ್ ನೇರವಾಗಿ ಹಿಂದಿರುವ ಮುಖಂಡರಿಗೆ ಕೊಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಕಮಿಷನ್ ಲೆಕ್ಕ ಇಲ್ಲ. ಆರೆಸ್ಸೆಸ್ ಬಗ್ಗೆ ಇವರು ಚರ್ಚೆ ಮಾಡ್ತಾರೆ, ಅದರಲ್ಲಿ ಕೆಲ ಪ್ರಮುಖರು ಇದ್ದಾರೆ‌. ಆರೆಸ್ಸೆಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗುತ್ತಿದೆ. ಆರೆಸ್ಸೆಸ್ ​ನ ಎರಡ್ಮೂರು ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಶಾಸಕರು, ಮಂತ್ರಿಗಳು ಎಲ್ಲರೂ ಪ್ರತಿ ಕೆಲಸದ ಕಮಿಷನ್ ನೇರವಾಗಿ ಹಿಂದಿರುವ ಮುಖಂಡರಿಗೆ ಕೊಡಬೇಕು. ಮುಂಬರುವ ಚುನಾವಣೆಗೆ ಹಣ ಸಂಗ್ರಹ ಎರಡ್ಮೂರು ನಿಂದಲೇ ಆರಂಭವಾಗಿದೆ. ನೇರವಾಗಿ ಆರೆಸ್ಸೆಸ್ ​​ನಿಂದ ನಡೆಯುತ್ತಿದ್ದು, ಯಾವುದೇ ಸಂಶಯವಿಲ್ಲ ಎಂದರು.

ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ಖರ್ಚು ಮಾಡಲು ಹಣ ಸಂಗ್ರಹ ಆಗುತ್ತಿದೆ. ಬೆಂಗಳೂರಿನ ಶಾಸಕರು, ಸಚಿವರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಕೇಳಿ ನೋಡಿ. ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. 100-120 ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ. ಯಾರ್ಯಾರಿಗೆ ಎಷ್ಟು ಪರ್ಸೆಂಟೇಜ್ ಹೋಗುತ್ತದೆ ಬಹಿರಂಗಪಡಿಸಲಿ. ಸ್ವೇಚ್ಛಾಚಾರವಾಗಿ ಲೂಟಿ ಮಾಡುವಂತಹ ವ್ಯವಸ್ಥೆ ರಾಜ್ಯದಲ್ಲಿ ನಡೆದಿದೆ ಎಂದು ಕಿಡಿಕಾರಿದರು.

ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಈಗಿರುವ ಎನ್​ಡಿಎ ಅಭ್ಯರ್ಥಿ ಗೆಲ್ಲಲೂ ಯಾವುದೇ ಸಮಸ್ಯೆ ಇಲ್ಲ. ನಡ್ಡಾ ಅವರು ಸಹ ಕರೆ ಮಾಡಿದ್ದಾರೆ‌. ಅಭ್ಯರ್ಥಿ ದ್ರೌಪದಿ ಮುರ್ಮು ಸಹ ಮಾತನಾಡಿದ್ದಾರೆ. ಶಾಸಕರ ಜೊತೆ ಕೂತು ಚರ್ಚೆ ಮಾಡಿ, ಅಂತಿಮ‌ ನಿರ್ಣಯ ಮಾಡ್ತೇವೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)