ಅಂತಾರಾಷ್ಟ್ರೀಯ
ದಕ್ಷಿಣ ಆಫ್ರಿಕಾ ನೈಟ್‌ಕ್ಲಬ್‌ನಲ್ಲಿ 17 ಜನರ ಮೃತದೇಹ ಪತ್ತೆ

ಜೊಹಾನ್ನೆಸ್‌ಬರ್ಗ್, ಜೂ.26: ದಕ್ಷಿಣ ಆಫ್ರಿಕಾದ ದಕ್ಷಿಣಪ್ರಾಂತದ ನಗರ ಈಸ್ಟ್‌ಲಂಡನ್‌ನ ನೈಟ್‌ಕ್ಲಬ್‌ನಲ್ಲಿ ರವಿವಾರ ಸುಮಾರು 17 ಯುವಜನರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈಸ್ಟ್‌ಲಂಡನ್‌ನ ಸಿನರಿಪಾರ್ಕ್‌ನ ಹೋಟೆಲ್‌ನಲ್ಲಿ 18ರಿಂದ 20 ವರ್ಷದೊಳಗಿನ ಸುಮಾರು 17 ಮಂದಿಯ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಘಟನೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಬ್ರಿಗೇಡಿಯರ್ ಥೆಂಬಿಂಕೋಸಿ ಕಿನಾನ ಹೇಳಿರುವುದಾಗಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಯಾವುದೇ ಗಾಯದ ಗುರುತು ಅಥವಾ ಲಕ್ಷಣಗಳಿಲ್ಲದ ಮೃತದೇಹಗಳನ್ನು ನೈಟ್‌ಕ್ಲಬ್‌ನ ನೆಲದ ಮೇಲೆ ಇರಿಸಿರುವ ಫೊಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಲವಾರು ಮಂದಿ ನೈಟ್‌ಕ್ಲಬ್‌ನ ಎದುರು ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ಸಮಾಧಾನಪಡಿಸಿ ಚದುರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ