ತೊಕ್ಕೊಟ್ಟು: ಬೆಲೆ ಏರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಉಳ್ಳಾಲ: ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮವು ತೊಕ್ಕೊಟ್ಟುವಿನಲ್ಲಿ ಮಂಗಳವಾರ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುರೇಖಾ ರವರು ಪಠ್ಯ ಪುಸ್ತಕ ಗೊಂದಲ ಮಾಡಿ ಜನರಿಗೆ, ವಿದ್ಯಾರ್ಥಿಗಳಿಗೆ ಸರ್ಕಾರ ತೊಂದರೆ ನೀಡುತ್ತಿದೆ. ನಾರಾಯಣ ಗುರು, ಅಂಬೇಡ್ಕರ್ ಪಾಠ ಕೈ ಬಿಟ್ಟು ಕೆಲವು ವರ್ಗಗಳಿಗೆ ಅನ್ಯಾಯ ಮಾಡಿದೆ.ನೇಶನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ರಾಹುಲ್ ಇಡಿ ಮೂಲಕ ದಾಳಿ ನಡೆಸಿದ್ದು ಸರ್ಕಾರ ದ ಕ್ರಮ ಸರಿಯಲ್ಲ. ಬಿಜೆಪಿ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಖಂಡನೀಯ.ಇದರ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು ಎಂದು ಹೇಳಿದರು .
ಕೆಪಿಸಿಸಿ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ಸರ್ಕಾರದ ಜನ ವಿರೋಧಿ ಆಡಳಿತದಿಂದ ದೇಶ ಬೇಸತ್ತು ಹೋಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಬೆಲೆ ಇಳಿಕೆ ಮಾಡುವ ಡಂಗುರ ಸಾರಿದರು. ಆದರೆ ಯಾವುದನ್ನು ಅವರು ಅನುಷ್ಠಾನಕ್ಕೆ ತರಲಿಲ್ಲ. ಒಂದು ಉದ್ಯೋಗ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಸಾಧ್ಯ ಆಗಿಲ್ಲ ಎಂದು ಆರೋಪಿಸಿದರು.
ದೇವಕಿ ಉಳ್ಳಾಲ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂ ರಾದ ಮಮತಾ ಗಟ್ಟಿ, ವೀಣಾ, ದೇವಕಿ ಉಳ್ಳಾಲ, ವೃಂದ ಪೂಜಾರಿ,ರೂಪ, ವಿಲ್ಮಾ ಆಲ್ಫ್ರೆಡ್ , ಪದ್ಮಾವತಿ , ರೇಣುಕಾ ಶೆಟ್ಟಿ,ದಮವಂತಿ,ಚಂಚಲಾಕ್ಷಿ, ನಂದಿನಿ,ಹೇಮಾ, ಶಾಲಿನಿ,ಲತಾ ವಿಶ್ವನಾಥ,ಸಫಿಯಾ, ಅನಿತಾ, ಸುಜಾತ, ವೀಣಾ ಶಾಂತಿ, ಭಾರತಿ, ಸಪ್ನ ಹರೀಶ್, ಶಾಂತಲಾ ಗಟ್ಟಿ, ವಾರಿಜಾ, ರಝಿಯಾ ಇಬ್ರಾಹಿಂ, ಐರಿನ್ ಡಿಸೋಜ, ಲಿದಿಯ, ಸುಗಂಧಿ, ನಗರ ಸಭೆ ಅಧ್ಯಕ್ಷ ಚಿತ್ರ ಕಲಾ ಜೆಸಿಂತಾ ಮೆಂಡೋನ್ಸಾ ಶಮೀಮ ಮತ್ತಿತರರು ಉಪಸ್ಥಿತರಿದ್ದರು