ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ: ಕೆಲವೆಡೆ ಕೃತಕ ನೆರೆ
ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ನಿರಂತರ ವಾಗಿ ಮಳೆಯಾಗುತ್ತಿದ್ದು, ಇದರಿಂದ ಕೆಲವು ಕಡೆಗಳಲ್ಲಿ ಕೃತಕ ನೆರೆ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೭೭.೨ಮಿ.ಮೀ. ಮಳೆ ಯಾಗಿದ್ದು, ಉಡುಪಿ- ೬೩.೭ಮಿ.ಮೀ., ಬ್ರಹ್ಮಾವರ- ೭೪.೭ಮಿ.ಮೀ., ಕಾಪು -೪೦.೯ಮಿ.ಮೀ., ಕುಂದಾಪುರ- ೭೪.೮ಮಿ.ಮೀ., ಬೈಂದೂರು- ೪೭.೫ ಮಿ.ಮೀ., ಕಾರ್ಕಳ-೮೬.೦ಮಿ.ಮೀ., ಹೆಬ್ರಿ-೧೩೪.೮ಮಿ.ಮೀ. ಮಳೆಯಾಗಿದೆ.
ಬುಧವಾರ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಕುಂದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ಉಂಟಾಗಿ ವಾಹನ ಸವಾರರು ಪರಾಡುವಂತಾಯಿತು. ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆಗಳಾದವು.
ಕುಂದಾಪುರ ಬಸ್ರೂರು ಮೂರುಕೈ-ವಿನಾಯಕ ಜಂಕ್ಷನ್, ಕುಂಭಾಸಿ, ತೆಕ್ಕಟ್ಟೆ, ಬೀಜಾಡಿ, ಕೋಟೇಶ್ವರ ಭಾಗದಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಕೆರೆ ಯಂತಾಗಿದೆ. ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಮೋಹಿನಿ ಭಂಡಾರಿ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿ ಯಾಗಿ ಸುಮಾರು ೪೦ಸಾವಿರ ರೂ. ನಷ್ಟ ಉಂಟಾಗಿದೆ.
ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಡುಗೋಪಾಡಿ ರಸ್ತೆಯಲ್ಲಿ ನೀರು ತುಂಬಿದ್ದು, ಶಾಲಾ ಮಕ್ಕಳು, ವಾಹನ ಸವಾರರು ಹಾಗೂ ಸಾರ್ವ ಜನಿಕರಿಗೂ ಓಡಾಡಲು ಸಮಸ್ಯೆಯಾಗಿದೆ. ಹಲವು ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಿದರೂ ಪ್ರತಿವರ್ಷವೂ ಇದೇ ಗೋಳು ಅನುಭವಿಸುತ್ತುದ್ದೇವೆ. ಇನ್ನಾದರೂ ಇಲಾಖೆ, ಆಡಳಿತ ವ್ಯವಸ್ಥೆ ಸಮಸ್ಯೆ ಪರಿಹಾರ ಮಾಡುವಲ್ಲಿ ಇಚ್ಛಾಶಕ್ತಿ ತೋರಬೇಕು.
-ಅಣ್ಣಪ್ಪ ಬೆಟ್ಟಿನಮನೆ ಬೀಜಾಡಿ