ರಾಷ್ಟ್ರೀಯ
ತೀಸ್ತಾ ಸಟಲ್ವಾಡ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಗುಜರಾತ್ ಕೋರ್ಟ್
ವಾರ್ತಾ ಭಾರತಿ : 2 Jul, 2022

ಹೊಸದಿಲ್ಲಿ, ಜು. 2: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಗುಜರಾತ್‌ನ ಮಾಜಿ ಡಿಜಿಪಿ ಆರ್.ಬಿ. ಶ್ರೀಕುಮಾರ್ ಅವರಿಗೆ ಗುಜರಾತ್ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಗುಜರಾತ್ ನ್ಯಾಯಾಲಯ ರವಿವಾರ ಸೆಟಲ್ವಾಡ್ ಅವರಿಗೆ ಜುಲೈ 2ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿತ್ತು. ಅನಂತರ ಪೊಲೀಸರು 14 ದಿನಗಳ ಕಸ್ಟಡಿ ಕೋರಿದ್ದರು.
ಈ ನಡುವೆ ತೀಸ್ತಾ ಸೆಟಲ್ವಾಡ್ ಅವರು ತನ್ನ ವಕೀಲ ಎಸ್.ಎಂ. ವತ್ಸ ಅವರ ಮೂಲಕ ಕಾರಾಗೃಹದಲ್ಲಿ ರಕ್ಷಣೆ ಕೋರಿದ್ದಾರೆ.
2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪುರಾವೆಗಳನ್ನು ತಿರುಚಿದ ಹಾಗೂ ನಕಲಿ ಮಾಡಿದ ಆರೋಪದಲ್ಲಿ ಸೆಟಲ್ವಾಡ್ ಅವರನ್ನು ಜೂನ್ 26ರಂದು ಪೊಲೀಸರು ಬಂಧಿಸಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)