ಪುರುಷ, ಮಹಿಳಾ ಆಟಗಾರರಿಗೆ ಸಮಾನ ವೇತನ ಶ್ರೇಣಿ ಘೋಷಿಸಿದ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ
Photo:twitter
ವೆಲ್ಲಿಂಗ್ಟನ್: ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಯು ಮಂಗಳವಾರ ತನ್ನ ಪುರುಷ ಮತ್ತು ಮಹಿಳಾ ಆಟಗಾರರಿಗೆ ಸಮಾನ ವೇತನ ಶ್ರೇಣಿಯನ್ನು ಘೋಷಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.
ದಿಗ್ಭ್ರಮೆಗೊಳಿಸುವ ನಿರ್ಧಾರವೊಂದರಲ್ಲಿ ದೇಶದ ವೃತ್ತಿಪರ ಮಹಿಳಾ ಹಾಗೂ ಪುರುಷರ ಕ್ರಿಕೆಟಿಗರು ಒಂದೇ ದಿನದಲ್ಲಿ ಒಂದೇ ಕೆಲಸಕ್ಕೆ ಒಂದೇ ವೇತನವನ್ನು ಪಡೆಯುತ್ತಾರೆ.
ಐದು ವರ್ಷಗಳ ಅವಧಿಯ ಒಪ್ಪಂದಕ್ಕೆ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ, ಆರು ಪ್ರಮುಖ ಸಂಸ್ಥೆಗಳು ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ಆಟಗಾರರ ಸಂಘ ಸಹಿ ಹಾಕಿವೆ. ಅದರ ಪ್ರಕಾರ, ವೈಟ್ ಫರ್ನ್ಸ್ ಹಾಗೂ ದೇಶೀಯ ಮಹಿಳಾ ಆಟಗಾರರು ತಮ್ಮ ಎಲ್ಲಾ ಮಾದರಿ ಕ್ರಿಕೆಟ್ ಹಾಗೂ ಸ್ಪರ್ಧೆಗಳಲ್ಲಿ ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ.
ವೈಟ್ ಫರ್ನ್ಸ್ ತಂಡದ ನಾಯಕಿ ಸೋಫಿ ಡಿವೈನ್ ಈ ಒಪ್ಪಂದವು ಮಹಿಳಾ ಕ್ರಿಕೆಟ್ಗೆ ಬದಲಾವಣೆ ತಂದಿದೆ ಎಂದು ಹೇಳಿದ್ದಾರೆ.
Next Story