ಲಾಂಛನದ ಅಪಹಾಸ್ಯ: ಸಿಎಂ ಬೊಮ್ಮಾಯಿ ಹೇಳಿಕೆಗೆ ಖಂಡನೆ
ಉಡುಪಿ, ಜು.೧೩: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಷ್ಟ್ರ ಲಾಂಛನದ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ನಮ್ಮದು ಸಿಂಹ ಗರ್ಜನೆ, ಕಾಂಗ್ರೆಸ್ನವರದ್ದು ನಿದ್ದೆ ಮಾಡುವ ಸಿಂಹ ಎಂದು ರಾಷ್ಟ್ರ ಲಾಂಛನದ ಬಗ್ಗೆ ಅಗೌರವ ತೋರಿ ಅಪಹಾಸ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೂಡಲೇ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ಆಗಿರುವ ಪ್ರಮಾದವನ್ನು ಒಪ್ಪಿಕೊಳ್ಳಬೇಕು. ರಾಷ್ಟ್ರ ಲಾಂಛನದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಾರನಾಥದ ಸ್ತಂಭ ರಾಷ್ಟ್ರ ಲಾಂಛನದ ಮುದ್ರೆ. ಶಾಂತಿಯ ಸಂದೇಶ ಸಾರಿದ ಅಶೋಕನ ಸಾರನಾಥದಲ್ಲಿರುವ ಸ್ತಂಭ ಅದರ ವಿನ್ಯಾಸವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ವಿನ್ಯಾಸದಲ್ಲಿನ ಲೋಪವನ್ನು ಕೂಡಲೇ ಸರಿಪಡಿಸಿ, ಸಾರನಾಥ ಸ್ತಂಬದಲ್ಲಿರುವಂತೆ ನಿರ್ಮಿಸಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ನ ಮಾಜಿ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ, ಗಣೇಶ್ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Next Story