ದನಸಾಕಣೆದಾರರಿಂದ ಗೋಮೂತ್ರ ಖರೀದಿಸಲಿರುವ ಛತ್ತೀಸಗಢ ಸರಕಾರ
ರಾಯಪುರ್: ಛತ್ತೀಸಗಢ ಸರಕಾರ ರಾಜ್ಯದ ಕೃಷಿಕರು ಹಾಗೂ ದನ ಸಾಕಣಿಕೆದಾರರಿಂದ ಗೋಮೂತ್ರವನ್ನು ತಲಾ ಲೀಟರ್‍ಗೆ ರೂ 4 ದರ ತೆತ್ತು ಖರೀದಿಸಲು ಚಿಂತಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತ ಪ್ರಾಯೋಗಿಕ ಯೋಜನೆ ಮುಂದಿನ ಎರಡು ವಾರಗಳಲ್ಲಿ ರಾಜ್ಯದ ಕೆಲ ಉತ್ತರದ ಜಿಲ್ಲೆಗಳಲ್ಲಿ ಆರಂಭಗೊಳ್ಳಲಿದೆ. ರಾಜ್ಯ ಸರಕಾರವು ಈಗಾಗಲೇ ಗೋ ಸಗಣಿಯನ್ನು ಖರೀದಿಸುತ್ತಿದೆ.
ಗೋಮೂತ್ರವನ್ನು ದನಸಾಕಣಿಗೆದಾರರನ್ನು ಪಡೆಯುವ ಕುರಿತಂತೆ ಸರಕಾರ ಫೆಬ್ರವರಿ 2022ರಲ್ಲಿ ನಿರ್ಧರಿಸಿತ್ತು. ಈ ಕುರಿತು ಪರಾಮರ್ಶಿಸಲು ಒಂದು ಸಮಿತಿಯನ್ನೂ ರಚಿಸಲಾಗಿತ್ತು. ಸಮಿತಿಯ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಮುಂದಿಡಲಾಗುವುದು, ಅವರ ಅನುಮತಿ ದೊರೆತ ನಂತರ ಯೋಜನೆ ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಗೇಲ್ ಅವರ ಸಲಹೆಗಾರ ಪ್ರದೀಪ್ ಶರ್ಮ ಹೇಳಿದ್ದಾರೆ.
ಗೋಮೂತ್ರವನ್ನು ಗ್ರಾಮ ಗೌತನ್ ಸಮಿತಿ ಮೂಲಕ ಪಡೆಯಲಾಗುವುದು ಹಾಗೂ ದನ ಸಾಕಣಿಕೆದಾರರಿಗೆ 15 ದಿನಗಳಿಗೊಮ್ಮೆ ಹಣ ಪಾವತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 28ರಂದು ಸ್ಥಳೀಯ ಹಬ್ಬದ ಸಂದರ್ಭ ಈ ಯೋಜನೆ ಜಾರಿಗೊಳಿಸುವ ನಿರೀಕ್ಷೆಯಿದೆ.