ಜಗನಾಥ ರೈ
ಸುಳ್ಯ: ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಜಗನಾಥ ರೈ (66)ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಳ್ಯದ ಇಎನ್ಟಿ ವೈದ್ಯರ ಬಳಿ ಚಿಕಿತ್ಸೆಗೆಂದು ಬಂದಿದ್ದ ಅವರು ಅಲ್ಲಿಂದ ಹಿಂತಿರುಗಿ ಕೆಳಗಡೆ ಇಳಿಯುತ್ತಿರುವಾಗ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ತಿಳಿದುಬಂದಿದೆ.
ಪೆರುವಾಜೆ ಗ್ರಾಮದ ಕನ್ನೆಜಾಲು ನಿವಾಸಿಯಾದ ಜಗನ್ನಾಥ ರೈ ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕರಾಗಿದ್ದರು.ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.
ಮೃತರು ಪತ್ನಿ, ಪುತ್ರ ಜೀವನ್ ರೈ ಕನ್ನೆಜಾಲು, ಪುತ್ರಿ ಜ್ಯೋತಿ ರೈ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
Next Story