BBMP ಚುನಾವಣೆಯಲ್ಲಿ ಸ್ವರ್ಧಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಎಎಪಿ
ಬೆಂಗಳೂರು, ಜು.22: ಬಿಬಿಎಂಪಿಯ ಎಲ್ಲ ವಾರ್ಡ್ಗಳಲ್ಲೂ ಸ್ಪರ್ಧಿಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ. ಸಾಮಾನ್ಯ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಲು ಪಕ್ಷವು ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಿದೆ. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಇರುವವರು ಅಭ್ಯರ್ಥಿ ಶೋಧನಾ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ‘7669100500 ಸಂಖ್ಯೆ ಮಿಸ್ಡ್ಕಾಲ್ ನೀಡುವ ಅಥವಾ AapAspirant@karnataka.aamaadmiparty.Org ವಿಳಾಸಕ್ಕೆ ಇಮೇಲ್ ಕಳುಹಿಸುವ ಮೂಲಕ ಸಂಪರ್ಕ ಮಾಡಬಹುದು. ಶೇμÁದ್ರಿಪುರಂನ ಕುಮಾರಪಾರ್ಕ್ ವೆಸ್ಟ್ ನಂಬರ್ 54ರಲ್ಲಿರುವ ನಮ್ಮ ನೂತನ ಕಚೇರಿಯಲ್ಲಿಯೂ ಇಂಗಿತ ವ್ಯಕ್ತಪಡಿಸಲು ಅವಕಾಶವಿದೆ ಎಂದರು.
"ಕೇಜ್ರಿವಾಲ್ಗೆ ಒಂದು ಅವಕಾಶ" ಎಂಬ ಘೋಷವಾಕ್ಯದ ಅಡಿಯಲ್ಲಿ, ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ನೇತೃತ್ವದಲ್ಲಿ ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸುರೇಶ್ ರಾಥೋಡ್, ಕುಶಲಸ್ವಾಮಿ, ಫರಿದುದ್ದೀನ್ ಷರೀಫ್, ಸಂಚಿತ್ ಸಹಾನಿಯವರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ಮೂಲಕ ನಗರದ ಸಾಮಾನ್ಯ ಪ್ರಜೆಗಳು, ಯುವಜನರು, ಮಹಿಳೆಯರು, ವಕೀಲರು ಮತ್ತು ಸಮಾಜದ ಎಲ್ಲಾ ಸ್ತರದ ಜನರನ್ನು ಚುನಾವಣೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇಡೀ ದೇಶ ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವ ಆಚರಿಸುತ್ತಿದೆ. ದುರದೃಷ್ಟವಶಾತ್ ಪ್ರಜಾಪ್ರಭುತ್ವ ಎಂಬುದು "ಆಯ್ದ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ" ಇರುವ ಸರಕಾರ ಇಂದು ದೇಶವನ್ನು ಆಳುತ್ತಿದೆ ಎಂದು ಕಿಡಿಕಾರಿದರು.
ದೆಹಲಿ ರಾಜ್ಯದ ಪ್ರಾಮಾಣಿಕ ಆಡಳಿತವು ಇಡೀ ದೇಶಕ್ಕೇ ಮಾದರಿಯಾಗಿದೆ, ಪಂಜಾಬ್ನಲ್ಲೂ ಭ್ರμÁ್ಟಚಾರರಹಿತ ಸರಕಾರ ಸೃಷ್ಟಿಯಾಗಿದೆ. ರಾಜ್ಯದಲ್ಲೂ ಇಂತಹ ಭ್ರಷ್ಟಾಚಾರ ತೊರೆಯುವ ಸರಕಾರವನ್ನು ನಿರ್ಮಿಸಲು ಶೇ.40 ಕಮಿಷನ್ ಸರಕಾರವನ್ನು ಕಿತ್ತೊಗೆಯಬೇಕು. ಒಂದು ಕೋಟಿ ಜನರು ಇರುವ ಈ ನಗರವನ್ನು ಕೆಲವೇ ದುಷ್ಟರ, ಭ್ರಷ್ಟರ ಕೈಗಳಿಗೆ ನೀಡಿ ಸುಮ್ಮನೆ ಕುಳಿತಿದ್ದೇವೆ. ಅವರು ನಮ್ಮ ಭವಿಷ್ಯದ ಮೇಲೆ ಪ್ರಹಾರ ಮಾಡುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಎಎಪಿಯ ಮುಖಂಡ ಸಂಚಿತ್ ಸಹಾನಿ, ಸುರೇಶ್ ರಾಥೋಡ್, ಕುಶಲ ಸ್ವಾಮಿ, ಫರೀದುದ್ದಿನ್ ಶರೀಫ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
'ಬಿ' ರೀಪೋರ್ಟ್ ವಿರುದ್ಧ ಇಂದು ಪ್ರತಿಭಟನೆ
ಮಾಜಿಮಂತ್ರಿ ಈಶ್ವರಪ್ಪ ಅವರು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ತನಿಖೆಯನ್ನು ಎದುರಿಸುತ್ತಿದ್ದರೂ, ಆರೋಪಿಯನ್ನು ಬಂಧಿಸದೆ, ಯಾವುದೇ ವಿಚಾರಣೆಯನ್ನು ನಡೆಸದೆ, ಏಕಾಏಕಿ ಬಿ ರೀಪೋರ್ಟ್ ಸಲ್ಲಿಸಲಾಗಿದೆ. ಇದರ ಹಿಂದಿನ ಮರ್ಮ ಏನೆಂಬುದು ರಾಜ್ಯದ ಜನತೆಗೆ ಯಕ್ಷ ಪ್ರಶ್ನೆಯಾಗಿದೆ. ಹಾಗಾಗಿ ಬಿಜೆಪಿ ಸರಕಾರ ಹಾಗೂ ರಾಜ್ಯ ಪೊಲೀಸ್ ಇಲಾಖೆ ವಿರುದ್ಧ ನಾಳೆ(ಜು.23) ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
-ಬಿ.ಟಿ.ನಾಗಣ್ಣ, ಎಎಪಿ ಮುಖಂಡ