ಲಂಡನ್ನಲ್ಲಿ ಬಿಸಿಗಾಳಿಗೆ ಜನಜೀವನ ಅಸ್ತವ್ಯಸ್ತ: ಕರಗಿದ ರೈಲು ಸಿಗ್ನಲ್ ಗಳು !
ವೀಡಿಯೊ ವೀಕ್ಷಿಸಿ
ಲಂಡನ್: ಯುನೈಟೆಡ್ ಕಿಂಗ್ಡಮ್ ನಲ್ಲಿ ತೀವ್ರವಾಗಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತೀವ್ರ ತಾಪಮಾನದಿಂದ ರೈಲು ಸಿಗ್ನಲ್ ಗಳು ಕರಗುತ್ತಿರುವ ಫೋಟೊ, ವೀಡಿಯೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ರೈಲು ಕ್ರಾಸಿಂಗ್ ಹಳಿಗಳು ಕೂಡಾ ತಾಪಮಾನದಿಂದ ಹಾನಿಗೊಳಗಾಗಿವೆ.
ದೇಶದಲ್ಲಿನ ದಾಖಲೆಯ ತಾಪಮಾನವು ಯಾವ ರೀತಿಯ ಹಾನಿಯನ್ನುಂಟುಮಾಡಿದೆ ಎಂಬುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ವೀಡಿಯೊಗಳಲ್ಲಿ ಬೃಹತ್ ಬೆಂಕಿಯಿಂದ ಹಾನಿಗೊಳಗಾದ ಲಂಡನ್ನ ಪೂರ್ವದ ಹೊರಗಿನ ಹಳ್ಳಿಯಲ್ಲಿನ ಮನೆಗಳನ್ನು ತೋರಿಸಿದರೆ, ಇನ್ನೊಂದು ವೀಡಿಯೋದಲ್ಲಿ ಹೆದ್ದಾರಿಯ ಬದಿಯಲ್ಲಿರುವ ಕಾಡಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ದಾಖಲಿಸಿದೆ.
ತೀವ್ರವಾದ ತಾಪದ ಕಾರಣದಿಂದ ಥಿಯೇಟರ್ ಒಂದರಲ್ಲಿ ಫೈರ್ ಅಲಾರಾಮ್ ಮೂಲಕ ನೀರು ಸಿಂಪಡಣೆಯಾಗುತ್ತಿರುವ ದೃಶ್ಯವನ್ನೂ ವೀಡಿಯೊಗಳು ದಾಖಲಿಸಿವೆ. ದಾಖಲೆಯ ತಾಪಮಾನದ ಕಾರಣದಿಂದಾಗಿ ದೇಶದಾದ್ಯಂತ ಹಲವಾರು ಅಗ್ನಿ ಅನಾಹುತಗಳೂ ನಡೆಯುತ್ತಿವೆ. ಮೂವತ್ತಕ್ಕೂ ಹೆಚ್ಚು ಬೆಂಕಿ ಅನಾಹುತಗಳನ್ನು ಈಗಾಗಲೇ ಸರಿಪಡಿಸಲಾಗಿದ್ದು, ನಗರದ ಸುತ್ತಮುತ್ತಲು ದಝನ್ ಗಟ್ಟಲೆ ಅಗ್ನಿಶಾಮಕ ಇಂಜಿನ್ ಗಳನ್ನು ನಿಯೋಜಿಸಲಾಗಿದೆ ಎಂದು ಲಂಡನ್ ಅಗ್ನಿಶಾಮಕ ದಳ ಹೇಳಿಕೆ ನೀಡಿದೆ.
When global warming sets off your thatched roof’s anti-Puritan/cannonfire sprinklers pic.twitter.com/cEKerw0w6N
— George Fouracres (@GeorgeFouracres) July 19, 2022
JUST IN - Massive fire at Dartford Heath in Kent, UK amid record-breaking heatwavepic.twitter.com/cmxtgpXcUn
— Insider Paper (@TheInsiderPaper) July 19, 2022