ಉಡುಪಿ: ದಿನದಲ್ಲಿ 11 ಮಂದಿಯಲ್ಲಿ ಕೋವಿಡ್ ಸೋಂಕು
ಉಡುಪಿ : ಶನಿವಾರ ಜಿಲ್ಲೆಯ 11 ಮಂದಿ ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ಒಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ 49 ಮಂದಿ ಕೋವಿಡ್ಗೆ ಚಿಕಿತ್ಸೆಯಲ್ಲಿದ್ದಾರೆ.
ಇಂದು ಪರೀಕ್ಷೆಗೊಳಗಾದ ೫೯೨ ಮಂದಿಯಲ್ಲಿ ೧೧ ಸೋಂಕು ಕಂಡುಬಂದಿದ್ದು ಇವರಲ್ಲಿ ಮೂವರು ಪುರುಷರಾದರೆ ಎಂಟು ಮಂದಿ ಮಹಿಳೆಯರು. ಶನಿವಾರ ಉಡುಪಿ ತಾಲೂಕಿನ ಎಂಟು ಮಂದಿಯಲ್ಲಿ, ಕುಂದಾಪುರದ ಇಬ್ಬರು ಹಾಗೂ ಕಾರ್ಕಳ ತಾಲೂಕಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ೧೦ ಮಂದಿ ತಮ್ಮ ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಮೂವರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಒಬ್ಬರು ವೆಂಟಿಲೇಟರ್ನಲ್ಲಿದ್ದಾರೆ.
ಇಂದು ಉಡುಪಿ ತಾಲೂಕಿನ ೨೪೦, ಕುಂದಾಪುರ ತಾಲೂಕಿನ ೨೩೦ ಹಾಗೂ ಕಾರ್ಕಳತಾಲೂಕಿನ ೧೨೨ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಜಿಲ್ಲೆಯಲ್ಲಿ ಇಂದು ೧೮ ಮಂದಿಗೆ ಮೊದಲ ಡೋಸ್, ೩೩ ಮಂದಿಗೆ ಎರಡನೇ ಡೋಸ್ ಹಾಗೂ ೬೦೦ ಮಂದಿಗೆ ಮುನ್ನೆಚ್ಚರಿಕೆ ಡೋಸ್ಗಳನ್ನು ನೀಡಲಾಗಿದೆ.
Next Story