ಮಲ್ಪೆಯಲ್ಲಿ ಚಿಂತಕ ಜಿ.ರಾಜಶೇಖರ್‌ಗೆ ನುಡಿನಮನ
ಮಲ್ಪೆ: ಇತ್ತೀಚೆಗೆ ನಿಧನರಾದ ಕಡಲ ತಡಿಯ ಸಾಕ್ಷಿಪ್ರಜ್ಞೆ, ಮಹಾ ಮಾನವತಾವಾದಿ ಚಿಂತಕ ಜಿ.ರಾಜಶೇಖರ್‌ಗೆ ನುಡಿನಮನ ಕಾರ್ಯಕ್ರಮವನ್ನು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ರವಿವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.
ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಕಳೆದ ಮೂರು ದಶಕಗಳ ಹಿಂದೆ ದಲಿತ ಚಳುವಳಿಗೆ ರಾಜಶೇಖರ್‌ರವರನ್ನು ಪರಿಚಯಿಸಿದ್ದೆ. ಅವರು ನಮ್ಮನ್ನು ಸಾಕಷ್ಟು ವೈಚಾರಿ ಚಿಂತನೆ ಮತ್ತು ಸೌರ್ಹಾದ ಬದಕಿನ ಬಗ್ಗೆ ಪಾಠ ಮಾಡಿ ಬೆಳೆಸಿದ್ದಾರೆ. ಜೊತೆಗೆ ಹಲವಾರು ಧರಣಿ, ಪ್ರತಿಭಟನೆ, ಮೆರವಣಿಗೆ ವಿವಿಧ ವಿಚಾರ ಸಂರ್ಕಿಣದಲ್ಲಿ ನಮ್ಮೊಂದಿಗೆ ಭಾಗಿಯಾಗುವ ಮೂಲಕ ದಲಿತ ಚಳವಳಿಯನ್ನು ಕರಾವಳಿಯಲ್ಲಿ ಜೀವಂತವಾಗಿರಲು ಶ್ರಮಿಸಿದ್ದಾರೆ ಎಂದರು.
ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ, ಕರ್ನಾಟಕದ ಕೋಮು ಸೌರ್ಹಾದೆಗೆ ಸದಾ ಮಿಡಿಯುತ್ತಿದ್ದ ಜಿ.ರಾಜಶೇಖರ್, ಶ್ರಮಜೀವಿಗಳ ಹೋರಾಟದ ಮಾರ್ಗವನ್ನು ಕಟ್ಟವಲ್ಲಿ ಸಾಕಷ್ಟು ದುಡಿದಿದ್ದಾರೆ ಎಂದು ಹೇಳಿದರು.
ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಸಂತೋಷ ಕಪ್ಪೆಟ್ಟು, ಗುಣವಂತ ತೊಟ್ಟಂ, ಕೃಷ್ಣ ಶ್ರೀಯಾನ್ ನೆರ್ಗಿ, ಪ್ರಸಾದ್ ಮಲ್ಪೆ, ರಾಮೋಜಿ ತಿಂಗಳಾಯ, ದಯಾನಂದ ಕಪ್ಪೆಟ್ಟು, ಸತೀಶ್ ಕಪ್ಪೆಟ್ಟು, ದಿನೇಶ್ ಜವನೆರಕಟ್ಟೆ, ಅನಿಲ್ ಕದಿಕೆ, ಸುರೇಶ್ ಚಿಟ್ಪಾಡಿ, ರಾಜೇಶ್ ಕೆಮ್ಮಣ್ಣು, ಪುನೀತ್ ಕದ್ಕೆ, ಭಗವಾನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.