'ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ಸೂರಲ್ಪಾಡಿ' ಜುಬೈಲ್ ಘಟಕದ ಮಾಸಿಕ ಸಭೆ
ಆ. 25ರಿಂದ 'ಚಾಲೆಂಜರ್ಸ್ ಟ್ರೋಫಿ-2022' ಕ್ರಿಕೆಟ್ ಪಂದ್ಯಾಟ
ಜುಬೈಲ್: ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ಸೂರಲ್ಪಾಡಿ ಇದರ ಜುಬೈಲ್ ಘಟಕದ ಮಾಸಿಕ ಸಭೆಯು ಜುಬೈಲ್ ನಲ್ಲಿ ಜು.21ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಅನ್ವರ್ ಸಾದತ್ ವಹಿಸಿದ್ದರು ಹಾಗೂ ಮುಖ್ಯ ಅತಿಥಿಯಾಗಿ ಊರಿನ ಗಣ್ಯವ್ಯಕ್ತಿ ಹಾಗೂ ಉದ್ಯಮಿ ಎಂ.ಎಸ್ ಅಬ್ದುಲ್ ಹಮೀದ್ ಸೂರಲ್ಪಾಡಿ ಭಾಗವಹಿಸಿದ್ದರು.
ಈ ಸಭೆಯಲ್ಲಿ ಸಿಎಫ್ಸಿ ಜುಬೈಲ್ ಘಟಕದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊನಲು ಬೆಳಕಿನ ನಿಗದಿತ ಓವರುಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲು ತೀರ್ಮಾನಿಸಲಾಯಿತು. ಅದರಂತೆ ಈ ಪಂದ್ಯಾಕೂಟವು ಜುಬೈಲ್ ನ ಅಲ್ ಫಲಾಹ್ ಕ್ರೀಡಾಂಗಣದಲ್ಲಿ ಆಗಸ್ಟ್ 25 - 26 ಹಾಗೂ ಸೆಪ್ಟೆಂಬರ್ 1-2 ರಂದು ನಡೆಯಲಿದ್ದು, ಈ ಪಂದ್ಯಾಕೂಟದಲ್ಲಿ ಸೌದಿ ಅರೇಬಿಯಾದ ಪ್ರತಿಷ್ಠಿತ 16 ತಂಡಗಳು ಭಾಗವಹಿಸಲಿವೆ.
ವಿಜೇತ ತಂಡಕ್ಕೆ ಟ್ರೋಫಿ ಹಾಗೂ 15,000 ರಿಯಾಲ್ ಗಳು ಮತ್ತು ದ್ವಿತೀಯ ಸ್ಥಾನಕ್ಕೆ ಟ್ರೋಫಿ ಹಾಗೂ 7,500 ರಿಯಾಲ್ ಗಳು ಮತ್ತು ಇನ್ನಿತರ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ಈ ಪಂದ್ಯಾಕೂಟದ ಸಮಿತಿಯ ಅಧ್ಯಕ್ಷರಾಗಿ ಮೊಹಮ್ಮದ್ ಇಮ್ರಾನ್ ಹಾಗೂ ವ್ಯವಸ್ಥಾಪಕರಾಗಿ ಇರ್ಷಾದ್ ಎಸ್. ಎ ಅವರನ್ನು ನೇಮಿಸಲಾಯಿತು. ಫರ್ವೇಝ್ ಅವರು ವಂದಿಸಿದರು.