ನಿಧನ
ಲಂಡನ್ ಮುಹಮ್ಮದ್ ಹಾಜಿ
ವಾರ್ತಾ ಭಾರತಿ : 5 Aug, 2022

ಮಂಗಳೂರು, ಆ.5: ಉಪ್ಪಳ ಸಮೀಪದ ಮಣ್ಣಂಗುಳಿ ನಿವಾಸಿ, ಉದ್ಯಮಿ, ಸಮಾಜ ಸೇವಕ ಮುಹಮ್ಮದ್ ಹಾಜಿ ಯಾನೆ ಲಂಡನ್ ಮುಹಮ್ಮದ್ ಹಾಜಿ (75) ಶುಕ್ರವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹೊಟೇಲ್ ಉದ್ಯಮಿಯಾಗಿದ್ದ ಮುಹಮ್ಮದ್ ಹಾಜಿ ಮಂಗಳೂರು ಮತ್ತು ಕಾಸರಗೋಡು ಭಾಗದಲ್ಲಿ ಸಮಾಜ ಸೇವೆಯ ಮೂಲಕ ಚಿರಪರಿಚಿತರಾಗಿದ್ದರು.
ಮಂಗಳೂರು, ಗೋವಾ, ಮುಂಬೈಯಲ್ಲಿ ಹೊಟೇಲ್‌ಗಳನ್ನು ಹೊಂದಿದ್ದ ಮುಹಮ್ಮದ್ ಹಾಜಿ ಅರ್ಹರಿಗೆ ಹಣಕಾಸಿನ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಸ್ವತಃ ದಾನಿಯೂ ಆಗಿ ಗುರುತಿಸಲ್ಪಟ್ಟಿದ್ದರು.
ಶುಕ್ರವಾರ ಮುಸ್ಸಂಜೆ ಉಪ್ಪಳದ ಮಣ್ಣಂಗುಳಿಯ ಮಸೀದಿಯ ಆವರಣದಲ್ಲಿ ದಫನ ಮಾಡಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)