ಕ್ರೀಡೆ
ಕಂಚಿನ ಪದಕಕ್ಕಾಗಿ ಹೋರಾಟ
ಕಾಮನ್‍ವೆಲ್ತ್ ಕ್ರೀಡಾಕೂಟ; ಹಾಕಿಯಲ್ಲಿ ಭಾರತದ ವನಿತೆಯರಿಗೆ ಸೋಲು

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ಮಹಿಳೆಯರ ಹಾಕಿ ಸ್ಪರ್ಧೆಯ ಸೆಮಿಫೈನಲ್‍ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 0-3 ಅಂತರದಿಂದ ಪೆನಾಲ್ಟಿ ಶೂಟೌಟ್‍ನಲ್ಲಿ ಸೋಲು ಅನುಭವಿಸಿದೆ. ಇದರೊಂದಿಗೆ ಫೈನಲ್ ಏರುವ ಭಾರತದ ಕನಸು ನುಚ್ಚು ನೂರಾಗಿದ್ದು, ಶನಿವಾರ ಕಂಚಿನ ಪದಕಕ್ಕಾಗಿ ಹೋರಾಡಲಿದೆ.
ನಿಗದಿತ ವೇಳೆಯಲ್ಲಿ ಉಭಯ ತಂಡಗಳು 1-1 ಡ್ರಾ ಸಾಧಿಸಿದ್ದವು. ಆಸ್ಟ್ರೇಲಿಯಾ ಮೊದಲಾರ್ಧದಲ್ಲೇ 1-0 ಮುನ್ನಡೆ ಗಳಿಸಿತು. ಆದರೆ ನಾಲ್ಕನೇ ಅವಧಿಯಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸುವ ಮೂಲಕ ಪಂದ್ಯವನ್ನು ಪೆನಾಲ್ಟಿ ಶೂಟೌಟ್‍ಗೆ ಒಯ್ದಿತು. ಆದರೆ ಪೆನಾಲ್ಟಿ ಶೂಟೌಟ್‍ನಲ್ಲಿ ಪಾರಮ್ಯ ಮೆರೆದ ಆಸ್ಟ್ರೇಲಿಯಾ 3-0 ಅಂತರದ ಸುಲಭ ಗೆಲುವು ಸಾಧಿಸಿತು. ಸವಿತಾ ಪೂನಿಯಾ ನೇತೃತ್ವದ ಭಾರತ ತಂಡದ ಮೊದಲ ಮೂರೂ ಪ್ರಯತ್ನಗಳು ಗೋಲಾಗಿ ಪರಿವರ್ತನೆಯಾಗಲಿಲ್ಲ.
ಇದಕ್ಕೂ ಮುನ್ನ ಎ ಗುಂಪಿನಲ್ಲಿ ಭಾರತ ನಾಲ್ಕು ಪಂದ್ಯಗಳಿಂದ ಒಂಬತ್ತು ಪಾಯಿಂಟ್ ಪಡೆದು ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಬಿ ಗುಂಪಿನ ಅಗ್ರಸ್ಥಾನಿಯಾಗಿ ಆಸ್ಟ್ರೇಲಿಯಾ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತ್ತು. ಕೂಟದಲ್ಲಿ ಆಸ್ಟ್ರೇಲಿಯಾ ಅಜೇಯ ತಂಡವಾಗಿ ಉಳಿದಿದೆ. ಫೈನಲ್‍ನಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‍ನ ಸವಾಲು ಎದುರಿಸಲಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ