varthabharthi


ಕರ್ನಾಟಕ

ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

ವಾರ್ತಾ ಭಾರತಿ : 6 Aug, 2022

ಬೆಂಗಳೂರು, ಆ.6: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಖಾಲಿಯಿರುವ ಕೆಲ ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ಹಾಗೂ ಹಲವು ಅಕಾಡೆಮಿಗಳಲ್ಲಿ ಮತ್ತು ರಂಗ ಸಮಾಜದಲ್ಲಿ ಈಗಾಗಲೆ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸದಸ್ಯರನ್ನು ಕೈ ಬಿಟ್ಟು ಅವರ ಸ್ಥಾನದಲ್ಲಿ ಹೊಸ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕಾತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಬ್ಯಾರಿ ಅಕಾಡೆಮಿ(ಮಂಗಳೂರು)ಯ ಸದಸ್ಯರನ್ನಾಗಿ ಉಡುಪಿ ಜಿಲ್ಲೆಯ ಅಬ್ದುಲ್ ರಹಿಮಾನ್, ಮುಹಮ್ಮದ್ ಮುಸ್ತಫಾ, ದಕ್ಷಿಣ ಕನ್ನಡ ಜಿಲ್ಲೆಯ ಹೈದರಾಲಿ, ಎಂ.ಕೆ.ಮಠ ಅವರನ್ನು ಆಯ್ಕೆ ಮಾಡಲಾಗಿದ್ದು,  ಅಧ್ಯಕ್ಷರ ನೇಮಕ ಆಗಿಲ್ಲ. 

ಕೊಂಕಣಿ ಸಾಹಿತ್ಯ ಅಕಾಡೆಮಿ(ಮಂಗಳೂರು)ಯ ಸದಸ್ಯರನ್ನಾಗಿ ಕುಂದಾಪುರದ ಓಂಗಣೇಶ್, ಹೊನ್ನಾವರದ ರಮೇಶ್ ಪುರಸಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ(ಬೆಂಗಳೂರು)ಯ ಸದಸ್ಯರನ್ನಾಗಿ ಮಂಗಳೂರಿನ ಡಾ.ಕೇಶವ ಬಂಗೇರ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಬಯಲಾಟ ಅಕಾಡೆಮಿ(ಬಾಗಲಕೋಟೆ)ಯ ಅಧ್ಯಕ್ಷರನ್ನಾಗಿ ಧಾರವಾಡದ ಅಜೀತ್ ನಾಗಪ್ಪ ಬಸಾಪುರ, ಸದಸ್ಯರನ್ನಾಗಿ ಬಳ್ಳಾರಿಯ ತಿಪ್ಪೇಸ್ವಾಮಿ ಹಾಗೂ ಚಿಕ್ಕಮಗಳೂರಿನ ದತ್ತಾತ್ರೇಯ ಅರಳಿಕಟ್ಟಿ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ(ಬೆಂಗಳೂರು)ಗೆ ಸದಸ್ಯರನ್ನಾಗಿ ಮಡಿಕೇರಿಯ ರಾಮಗೌತಮ್, ಧಾರವಾಡದ ಗುರು ಸಿದ್ದಪ್ಪ, ಗದಗ ಜಿಲ್ಲೆಯ ಕಮಲ್ ಅಹಮದ್, ದಾವಣಗೆರೆ ಜಿಲ್ಲೆಯ ಶಿಲ್ಪಾ ಕಡಕಭಾವಿ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ನಾಟಕ ಅಕಾಡೆಮಿ(ಬೆಂಗಳೂರು)ಗೆ ಸದಸ್ಯರನ್ನಾಗಿ ಬಿಜಾಪುರದ ಶ್ರೀಧರ ಹೆಗಡೆ, ಉಡುಪಿಯ ಪ್ರದೀಪ್‍ಚಂದ್ರ, ಧಾರವಾಡದ ಆರತಿದೇವ, ಮೈಸೂರಿನ ಜೀವನ್ ಕುಮಾರ್, ಕೋಲಾರದ ವಿಜಯಕುಮಾರ್, ಉತ್ತರ ಕನ್ನಡ ಜಿಲ್ಲೆಯ ಗಣಪತಿ ಹಿತ್ಲಕೈ, ಬೆಂಗಳೂರಿನ ಎಂ.ಎನ್.ಕಿರಣ್‍ಕುಮಾರ್ ಹಾಗೂ ಪ್ರಸನ್ನಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿ(ಬೆಂಗಳೂರು)ಗೆ ಸದಸ್ಯರನ್ನಾಗಿ ತುಮಕೂರು ಜಿಲ್ಲೆಯ ಡಾ.ಅಪ್ಪಾಜಿ, ಹಾವೇರಿ ಜಿಲ್ಲೆಯ ಬಸವರಾಜ ಶಿವಪ್ಪ, ಬಳ್ಳಾರಿಯ ಶಿವೇಶ್ವರ ಗೌಡ, ಬಾಗಲಕೋಟೆಯ ಸಣ್ಣವೀರಪ್ಪ ಹಾಲಪ್ಪ, ಕರ್ನಾಟಕ ಸಂಗೀತ ಅಕಾಡೆಮಿ(ಬೆಂಗಳೂರು)ಯ ಸದಸ್ಯರನ್ನಾಗಿ ಹಾಸನ ಜಿಲ್ಲೆಯ ಗಣೇಶ್ ಉಡುಪ ಹಾಗೂ ಯಲ್ಲಾಪುರ ತಾಲೂಕಿನ ನಾಗರಾಜ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ(ಕೊಡಗು)ಯ ಸದಸ್ಯರನ್ನಾಗಿ ಕೌಶಲ್ಯಾ ಸತೀಶ ಸೋಮಯೆಂಡ, ಮಡಿಕೇರಿಯ ನಾಗೇಶ ಕಾಲೂರು, ಸೋಮವಾರಪೇಟೆಯ ಚಾಮರ ದಿನೇಶ್ ಬೆಳ್ಯಪ್ಪ, ರಂಗ ಸಮಾಜದ ಸದಸ್ಯರನ್ನಾಗಿ ಧಾರವಾಡದ ಡಾ.ಶಶಿಧರ ನರೇಂದ್ರ, ಬೆಳ್ತಂಗಡಿಯ ಡಾ.ಶೀನ ನಡೋಳಿ, ಕಲಬುರಗಿಯ ರಾಜಣ್ಣ ಜೇವರ್ಗಿ, ಬೆಂಗಳೂರಿನ ದಾಕ್ಷಾಯಿಣಿ ಭಟ್, ಶಿಕಾರಿಪುರದ ಡಾ.ಗುರುಪ್ರಸಾದ್ ಟಿ.ಆರ್ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಹಾಸನ ಜಿಲ್ಲೆಯ ಡಾ.ಡ್ಯಾನಿ ಪೇರೆರ ಹಾಗೂ ಚಿತ್ರದುರ್ಗ ಜಿಲ್ಲೆಯ ಡಾ.ರಾಜೀವ್ ಲೋಚನ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)